ಔಷಧಗಳ ಅಕ್ರಮ ಆನ್‌ಲೈನ್ ಮಾರಾಟದ ಕುರಿತು ತುರ್ತು ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ
ತೀರ್ಥಹಳ್ಳಿ : ಔಷಧಗಳ ಅಕ್ರಮ ಆನ್‌ಲೈನ್ ಮಾರಾಟದ ಕುರಿತು ತುರ್ತು ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ತೀರ್ಥಹಳ್ಳಿ ಮೆಡಿಕಲ್ ಮಾಲೀಕರು ಮನವಿ ಸಲ್ಲಿಸಿದರು..
ಈಗಾಗಲೇ ದೀರ್ಘಕಾಲದ ಮನವಿಯ ನಂತರವೂ ಆನ್‌ಲೈನ್‌ನಲ್ಲಿ ಅಕ್ರಮವಾಗಿ ಔಷಧ ಮಾರಾಟ ಮಾಡುತ್ತಿರುವವರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ, ನಾವು ಇಂದು (20 ಮೇ 2026) ಸಾಂಕೇತಿಕ ಮುಷ್ಕರದ ಭಾಗವಾಗಿ ನಮ್ಮ ಎಲ್ಲಾ ಅಂಗಡಿಗಳನ್ನು ಮುಚ್ಚಿದ್ದೇವೆ..ನಮ್ಮ ಲಕ್ಷಾಂತರ ಸದಸ್ಯರು ಒಕ್ಕೊರಲಿನಿಂದ ತೆಗೆದುಕೊಂಡ ತೀರ್ಮಾನದಂತೆ, ಅಖಿಲ ಭಾರತೀಯ ಔಷಧ ವ್ಯಾಪಾರಿಗಳ ಸಂಘ (AIOCD) ಮತ್ತು ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಕರೆಯ ಮೇರೆಗೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ಔಷಧ ವ್ಯಾಪಾರಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇವೆ. ಸಾರ್ವಜನಿಕ ಆರೋಗ್ಯ ಮತ್ತು ರೋಗಿಗಳ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳ ಬಗ್ಗೆ ನಿಮ್ಮ ಗಮನ ಸೆಳೆಯಲು ಈ ಮನವಿಯನ್ನು ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಅಕ್ರಮ ಮತ್ತು ಅನಿಯಂತ್ರಿತ ಆನ್‌ಲೈನ್ ಔಷಧ ಮಾರಾಟ, ನಕಲಿ ಇ-ಪ್ರಿಸ್ಕ್ರಿಪ್ಷನ್‌ಗಳು, ವೈದ್ಯಕೀಯ ಸಮಾಲೋಚನೆ ಇಲ್ಲದೆ ಮನೆ ಬಾಗಿಲಿಗೆ ಔಷಧ ತಲುಪಿಸುವುದು ಮತ್ತು ಅತಿಯಾದ ರಿಯಾಯಿತಿ ನೀಡುವ ಪದ್ಧತಿಗಳು ಕೋಟ್ಯಂತರ ರೋಗಿಗಳ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿವೆ. ಅಷ್ಟೇ ಅಲ್ಲದೆ, ದೇಶಾದ್ಯಂತ ಇರುವ ಲಕ್ಷಾಂತರ ಪರವಾನಗಿ ಪಡೆದ ಔಷಧ ವ್ಯಾಪಾರಿಗಳ ಜೀವನೋಪಾಯಕ್ಕೂ ಇದು ದೊಡ್ಡ ಸಂಚಕಾರ ತಂದಿದೆ. ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ 1940 ಮತ್ತು ನಿಯಮಗಳು 1945 ರ ಅಡಿಯಲ್ಲಿ ಆನ್‌ಲೈನ್ ಔಷಧ ಮಾರಾಟಕ್ಕೆ ಯಾವುದೇ ಸ್ಪಷ್ಟ ಅವಕಾಶವಿಲ್ಲದಿದ್ದರೂ, ಕಳೆದ ಹಲವು ವರ್ಷಗಳಿಂದ ವಿವಿಧ ಆನ್‌ಲೈನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಔಷಧಗಳನ್ನು ಮಾರಾಟ ಮಾಡುತ್ತಿವೆ. ಹಾಗಾಗಿ ತುರ್ತು ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನಮಂತ್ರಿಗಳಿಗೆಮನವಿ ಸಲ್ಲಿಸಿದರು..
ಈ ಸಂದರ್ಭದಲ್ಲಿ ಮಾನಸ ಮೆಡಿಕಲ್ ಸತೀಶ್, ಬಳಗಟ್ಟೆ ಮೆಡಿಕಲ್ ಗಿರೀಶ್, ಶ್ರೀರಾಮ್ ಮೆಡಿಕಲ್ ಸಂದೇಶ್, ಮಲ್ನಾಡ್ ಮೆಡಿಕಲ್ ಮುರುಳಿ, ಶ್ರೀ ನೇಮಿಚಂದ್ರ ಮೆಡಿಕಲ್ ಜಯಾನಂದ್, ಸಹ್ಯಾದ್ರಿ ಮೆಡಿಕಲ್ ನಿರಂಜನ್, ಮರಿಯಾ ಮೆಡಿಕಲ್, ಸುನಿಲ್, ಕೃಷ್ಣ ಡ್ರಗ್ ಹೌಸ್ ಮಿಥೇಶ್, ಲಕ್ಷ್ಮಿ ಮೆಡಿಕಲ್ ರಾಜೀವನ್,ಕೃಷ್ಣ ಮೆಡಿಕಲ್ ಜೈದೇವ್, ಯಡೂರು ಮೆಡಿಕಲ್ ಪ್ರೇಮ್, ಅಭಿನವ್ ಮೆಡಿಕಲ್ ಪ್ರದೀಪ್, ವಿನಾಯಕ ಮೆಡಿಕಲ್ ನಿರಂಜನ್, ಆರ್ ಕೆ ಮೆಡಿಕಲ್ ರಾಘವೇಂದ್ರ, ಮಂಜುನಾಥ್ ಮೆಡಿಕಲ್ ಮಂಜುನಾಥ್ ಹೆಬ್ಬಾರ್, ಅನುರಾಧ ಮೆಡಿಕಲ್ ನಂದನ್, ಮೆಡ್ ಫಾರ್ಮ ಮೆಡಿಕಲ್ ಅನಿಲ್, ಅನ್ನಪೂರ್ಣ ಮೆಡಿಕಲ್ ದಿವಾಕರ್, ಗಾಯತ್ರಿ ಆಸ್ಪತ್ರೆ ಉಮಾಶಂಕರ್, ಮಕ್ಕಿಮನೆ ಮೆಡಿಕಲ್ ಪ್ರಶಾಂತ್, ನ್ಯೂ ನೇಮಿಚಂದ್ರ ಮಂಜುನಾಥ್, ಯಡೆಹಳ್ಳಿ ಮೆಡಿಕಲ್ ರಾಘವೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು..
Tags:
ತೀರ್ಥಹಳ್ಳಿ ಸುದ್ದಿ