ರಾಜ್ಯಮಟ್ಟದಲ್ಲಿ ನಾಲ್ಕು ರ‌್ಯಾಂಕ್ ಪಡೆಯುವ ಮೂಲಕ ದಾಖಲೆ ಬರೆದ ಸಹ್ಯಾದ್ರಿ ಶಿಕ್ಷಣ ಸಂಸ್ಥೆ Sahyadri

ರಾಜ್ಯಮಟ್ಟದಲ್ಲಿ ನಾಲ್ಕು ರ‌್ಯಾಂಕ್ ಪಡೆಯುವ ಮೂಲಕ ದಾಖಲೆ ಬರೆದ ಸಹ್ಯಾದ್ರಿ ಶಿಕ್ಷಣ ಸಂಸ್ಥೆ

ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಸತತವಾಗಿ  ಶೇ.100 ರ ಫಲಿತಾಂಶ 

ತೀರ್ಥಹಳ್ಳಿ : ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ನಾಲ್ಕು ರ‌್ಯಾಂಕ್ ಗಳನ್ನು ಪಡೆಯುವ ಮೂಲಕ ಹಾಗೂ ಸತತವಾಗಿ  ಶೇ.100 ರ ಫಲಿತಾಂಶ ಪಡೆಯುವ ಮೂಲಕ ದಾಖಲೆ ಬರೆದಿದೆ.

2025-26 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ಹೃದಯ ಭಾಗದಲ್ಲಿರುವ ಸಹ್ಯಾದ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಶೇಕಡಾ 100% ಫಲಿತಾಂಶದೊಂದಿಗೆ  ರಾಜ್ಯ ಮಟ್ಟದ ರ‍್ಯಾಂಕ್‌ಗಳನ್ನು ಪಡೆದಿರುತ್ತದೆ. 

ಅವನಿ ಆರ್. ಶೇ. 98.5 ರಷ್ಟು ಅಂಕವನ್ನು ಪಡೆಯುವುದರ ಮೂಲಕ ರಾಜ್ಯ ಮಟ್ಟದ 9 ನೇ ರ‍್ಯಾಂಕ್ ಪಡೆದಿದ್ದು, ಸಿಂಚನಾ ಡಿ.ಎಸ್. ಶೇ 98.16 ಮತ್ತು, ಪ್ರೇರಣಾ ಪ್ರಭು ಶೇ. 98.16 ಪಡೆಯುವ ಮೂಲಕ ರಾಜ್ಯ ಮಟ್ಟದ 10 ನೇ ರ‍್ಯಾಂಕ್ ಹಾಗೂ ಆವಿಷ್ಕಾರ ಎನ್. ವಿಜ್ಞಾನ ವಿಭಾಗದಲ್ಲಿ ಶೇ 98 ಅಂಕಗಳನ್ನು ಪಡೆಯುವ ಮೂಲಕ ರಾಜ್ಯ ಮಟ್ಟದ 12ನೇ ರ‍್ಯಾಂಕ್ ಪಡೆದಿರುತ್ತಾರೆ. 

ಉಳಿದಂತೆ ಕಾಮರ್ಸ್ ವಿಭಾಗದಲ್ಲಿ 52 ವಿದ್ಯಾರ್ಥಿಗಳು ಅತ್ಯುತ್ತಮ ಹಾಗೂ 24 ವಿದ್ಯಾರ್ಥಿಗಳು ಪ್ರಥಮ, ವಿಜ್ಞಾನ ವಿಭಾಗದಲ್ಲಿ 69 ವಿದ್ಯಾರ್ಥಿಗಳಲ್ಲಿ 30 ಅತ್ಯುತ್ತಮ ಹಾಗೂ 39 ಪ್ರಥಮ ಶ್ರೇಣಿ ಪಡೆದಿದ್ದಾರೆ. ಈ ಮೂಲಕ ಸತತವಾಗಿ ಶೇ 100 ಫಲಿತಾಂಶ ಪಡೆಯುವುದರೊಂದಿಗೆ ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿರುವ ಸಾಧಕ ವಿದ್ಯಾರ್ಥಿಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಆಡಳಿತಅಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಬೋಧಕೇತರ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.
Previous Post Next Post