ದ್ವಿತೀಯ ಪಿಯುಸಿ ಫಲಿತಾಂಶ - ಶೇ 97% ಪಡೆದ ಸಹ್ಯಾದ್ರಿ ಸಂಸ್ಥೆಯ ರಶ್ಮಿ
ತೀರ್ಥಹಳ್ಳಿ : ದ್ವಿತೀಯ ಪಿಯುಸಿ ಪರೀಕ್ಷೆಯ ಕಾಮರ್ಸ್
ವಿಭಾಗದಲ್ಲಿ ತೀರ್ಥಹಳ್ಳಿಯ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ
ವಿದ್ಯಾರ್ಥಿನಿ ರಶ್ಮಿ ಎಚ್ ಆರ್ ದಾಖಲೆ ಮಾಡಿದ್ದಾರೆ.
ತೀರ್ಥಹಳ್ಳಿಯ ಮೇಲಿನಕುರುವಳ್ಳಿ ನಿವಾಸಿಯಾಗಿರುವ ರಾಘವೇಂದ್ರ ಹಾಗೂ ಗೀತಾ ದಂಪತಿಗಳ ಪುತ್ರಿಯಾಗಿರುವ ರಶ್ಮಿ ಎಚ್ ಆರ್ ತೀರ್ಥಹಳ್ಳಿಯ ಸಹ್ಯಾದ್ರಿ ಸಂಸ್ಥೆಯ ಪಿ ಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯ ಕಾಮರ್ಸ್ ವಿಭಾಗದಲ್ಲಿ 600 ಅಂಕಗಳಿಗೆ 588 ಅಂಕ ಪಡೆದಿದ್ದಾರೆ.
ದೀಕ್ಷಾ ಅವರಿಗೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಹಾಗೂ ತೀರ್ಥಹಳ್ಳಿಯ ಜನತೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ರಶ್ಮಿ ಅವರ ಮುಂದಿನ ಶಿಕ್ಷಣ ಜೀವನ ಯಶಸ್ವಿಯಾಗಿರಲಿ ಎಂದು ಶಿವಮೊಗ್ಗ ಸುದ್ದಿ ಮಾಧ್ಯಮ ಹಾರೈಸುತ್ತದೆ.
Tags:
ತೀರ್ಥಹಳ್ಳಿ ಸುದ್ದಿ