ಸಿಗಂದೂರು ಸೇತುವೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಥಾರ್ ಜೀಪ್
ಸಾಗರ : ಸಿಗಂದೂರು ಸೇತುವೆಯ ಸಮೀಪ ಕಳೆದ ರಾತ್ರಿ ಸಿಗಂದೂರು ಕಡೆಯಿಂದ ಸಾಗರಕ್ಕೆ ಪ್ರಯಾಣಿಸುತ್ತಿದ್ದ ಥಾರ್ ಜೀಪ್, ಸೇತುವೆಯ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.
ಘಟನೆಯ ಸಮಯದಲ್ಲಿ ವಾಹನದಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಥಾರ್ ಪಲ್ಟಿಯಾದ ರಭಸಕ್ಕೆ ಅದರ ಮಂಬಾಗದ ಬಾನೆಟ್ ನುಜ್ಜುಗುಜ್ಜಾಗಿದೆ.
ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.
Tags:
ಅಪಘಾತ ಸುದ್ದಿ