ಬೈಕ್ ಅಪಘಾತದಲ್ಲಿ ಪತ್ರಕರ್ತ ಅನಿಲ್ ಸಾವು..!
ಶಿವಮೊಗ್ಗ : ಬೆಂಕಿನಗರದ ಮುಖ್ಯ ರಸ್ತೆಯ ತಿರುವಿನಲ್ಲಿ ನಿನ್ನೆ ತಡರಾತ್ರಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು ಅಫಘಾತದಲ್ಲಿ ಬಿ.ಟಿವಿ ವಾಹಿನಿಯ ವರದಿಗಾರ, ಪತ್ರಕರ್ತ ಅನಿಲ್ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ.
ತಡರಾತ್ರಿ ಅಪಘಾತ ನಡೆದಿದ್ದು ಅಪಘಾತದಲ್ಲಿ ತೀವ್ರ ಪೆಟ್ಟಾಗಿದ್ದು ಸ್ಥಳೀಯ ಮ್ಯಾಕ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಪೆಟ್ಟಾಗಿದ್ದ ಅನಿಲ್ ಚಿಕಿತ್ಸೆ ಫಲಕಾರಿಯಾಗದೆ ನಿಧಾನರಾಗಿದ್ದಾರೆ ಎಂದು ತಿಳಿದು ಬಂದಿದೆ.
Tags:
ಅಪಘಾತ ಸುದ್ದಿ