ಶಿವಮೊಗ್ಗದ ಹೋಟೆಲ್ ನಲ್ಲಿ ಗೃಹ ಬಳಕೆಯ ಸಿಲಿಂಡರ್ ಪತ್ತೆ - ಅಧಿಕಾರಿಗಳಿಂದ ಸೀಜ್ ! Shivamogga

ಶಿವಮೊಗ್ಗದ ಹೋಟೆಲ್ ನಲ್ಲಿ ಗೃಹ ಬಳಕೆಯ ಸಿಲಿಂಡರ್ ಪತ್ತೆ -  ಅಧಿಕಾರಿಗಳಿಂದ ಸೀಜ್ !

ಶಿವಮೊಗ್ಗ: ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ನಡುವೆಯೇ ನಗರದ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಗೃಹಬಳಕೆಯ ಸಿಲಿಂಡರ್'ಗಳು ಪತ್ತೆಯಾಗಿದ್ದು, ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ನೆಹರು ಕ್ರೀಡಾಂಗಣದ ಬಳಿ ಇರುವ ಹೋಟೆಲ್ ನಲ್ಲಿ ಗೃಹ ಬಳಕೆಯ ಸಿಲಿಂಡರ್'ಗಳನ್ನು ಉಪಯೋಗಿಸುತ್ತಿದ್ದ ವೇಳೆ ಆಹಾರ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗೃಹ ಬಳಕೆಯ ಸಿಲಿಂಡರ್'ಗಳು ಪತ್ತೆಯಾಗಿದ್ದು, ಅವರುಗಳನ್ನು ಸೀಜ್ ಮಾಡಿದ್ದಾರೆ. ಅಗತ್ಯ ವಸ್ತು ಕಾಯ್ದೆ ಮತ್ತು ಎಲ್'ಪಿಜಿ ಆಕ್ಟ್ 2000 ಅಡಿಯಲ್ಲಿ ಮೂರು ಸಿಲಿಂಡರ್'ಗಳನ್ನು ವಶಪಡಿಸಿಕೊಂಡಿದ್ದಾರೆ.  ವಶಕ್ಕೆ ಪಡೆದ ಸಿಲಿಂಡರ್'ಗನ್ನು ಅಮಾನತು ಪಡಿಸಿ ಸಂಬಂಧ ಪಟ್ಟ ಗ್ಯಾಸ್ ಕಂಪನಿಯಲ್ಲಿ ಇರಿಸಿದ್ದು ಮುಂದಿನ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. 

ಈ ಕಾರ್ಯಾಚರಣೆಯಲ್ಲಿ ಫುಡ್ ಸಹಾಯಕ  ನಿರ್ದೇಶಕರಾದ ಲಕ್ಷ್ಮಿ ಮತ್ತು ಆಹಾರ ನಿರೀಕ್ಷಕರಾದ ರಾಜಪ್ಪ ಹಾಗೂ ಮನೋಜ್ ರಾವ್ ಭಾಗವಹಿಸಿದ್ದರು.





Previous Post Next Post