ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ
ಶಿವಮೊಗ್ಗ : ಆಲ್ಕೊಳ ವೃತ್ತದ ಬಳಿಯಲ್ಲಿ ಚಲಿಸುತ್ತಿದ್ದ ಡಸ್ಟರ್ ಕಾರಿನ ಇಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಕಾಡಿಸಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಬೆಂಕಿ ನಂದಿಸಲಾಗಿದೆ. ಎಂಜಿನ್ ಭಾಗದಲ್ಲಿ ಮಾತ್ರ ಬೆಂಕಿ ಆವರಿಸಿಕೊಂಡಿದ್ದು. ಅದನ್ನ ಆರಿಸಲಾಗಿದೆ.
ಆಲ್ಕೊಳ ವೃತ್ತದ ಬಳಿ ಚಲಿಸುತ್ತಿದ್ದ ಡಸ್ಟರ್ ಕಾರಿನಲ್ಲಿ ಇಂಜಿನ್ ನಲ್ಲಿ ಮೊದಲಿಗೆ ಹೊಗೆ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ. ಘಟನೆ ನಡೆದ ಸ್ಥಳದಲ್ಲಿಯೇ ಪೆಟ್ರೊಲ್ ಬಂಕ್ ಇದ್ದಿದ್ದರಿಂದ ಬೆಂಕಿ ಆರಿಸಲಾಗಿದೆ.
ಗಾಡಿಕೊಪ್ಪದಿಂದ ಡಸ್ಟರ್ ಕಾರು ಬಸ್ ನಿಲ್ದಾಣದ ಕಡೆ ಚಲಿಸುತ್ತಿತ್ತು. ಸ್ಥಳೀಯರ ಮಾಹಿತಿ ಪ್ರಕಾರ ಗ್ಯಾರೇಜ್ ಗೆ ಬಿಟ್ಟಿದ್ದ ಕಾರನ್ನ ಪರೀಕ್ಷಿಸಲು ಮೆಕಾನಿಕ್ ಚಲಿಸಿಕೊಂಡು ಬಂದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ವಿನೋಬ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..
Tags:
ಶಿವಮೊಗ್ಗ ಸುದ್ದಿ