ತೀರ್ಥಹಳ್ಳಿ ಪಟ್ಟಣದ ಅಭಿವೃದ್ಧಿಗೆ "ರತ್ನ" ದಂತ ಬಜೆಟ್ ಮಂಡಿಸಿದ ಅಧ್ಯಕ್ಷರು..Muncipal

ತೀರ್ಥಹಳ್ಳಿ ಪಟ್ಟಣದ ಅಭಿವೃದ್ಧಿಗೆ "ರತ್ನ" ದಂತ ಬಜೆಟ್ ಮಂಡಿಸಿದ ಅಧ್ಯಕ್ಷರು..

ತೀರ್ಥಹಳ್ಳಿ : ಪಟ್ಟಣ ಪಂಚಾಯತಿಯ 2026-27 ನೇ ಸಾಲಿನ ಬಜೆಟ್ ಮಂಡನೆಯನ್ನು ಹಾಲಿ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ ಮಂಡಿಸಿದರು. ಇದು ಇವರ ಮೊಟ್ಟ ಮೊದಲ ಬಜೆಟ್ ಮಂಡನೆಯಾಗಿದೆ. ಮೊದಲ ಬಜೆಟ್ ಮಂಡನೆಯಲ್ಲಿಯೇ ಬಡವರ ಪರ ವಾದಂತಹ ಬಜೆಟ್ ಮಂಡಿಸಿದ ಕೀರ್ತಿ ಕೂಡ ಇವರದ್ದಾಗಿದೆ.

ಮಂಗಳವಾರ ಪಟ್ಟಣ ಪಂಚಾಯತಿಯ ಬಿ ರವೀಂದ್ರ ಶೆಟ್ಟಿ ಸಭಾಂಗಣದಲ್ಲಿ ನಡೆದ ಬಜೆಟ್ ಮಂಡನೆಯಲ್ಲಿ ಒಟ್ಟು 34 ಕೋಟಿ ರೂ ವೆಚ್ಚದ ಬಜೆಟ್ ಮಂಡಿಸಲಾಯಿತು. ಈ ವೇಳೆ ಬಜೆಟ್ ಮಂಡನೆಯನ್ನು ಮಂಡಿಸುತ್ತಿದ್ದ ರತ್ನಾಕರ್ ಶೆಟ್ಟಿ ಅವರನ್ನು ನೋಡಿದರೆ ಸಿದ್ದರಾಮಯ್ಯರವರನ್ನು ನೋಡಿದಂತೆ ಆಗುತ್ತದೆ. ಆದರೆ ರತ್ನಾಕರ ಶೆಟ್ಟಿ ಇರುವುದು ಸದಾನಂದ ಗೌಡರಂತೆ ಎಂಬ ಮಾತು ಕಾಂಗ್ರೆಸ್ ಪಕ್ಷದ ಸದಸ್ಯರಿಂದ  ಕೇಳಿ ಬಂತು . ಮೊಟ್ಟ ಮೊದಲ ಬಾರಿಗೆ ಬಜೆಟ್ ಮಂಡಳಿಸುತ್ತಿದ್ದರು ಸಹ ಬಡವರ ಪರವಾಗಿ ರತ್ನಾಕರ್ ಶೆಟ್ಟಿ ಅವರು ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಸದಸ್ಯರು ಸಂತಸ ವ್ಯಕ್ತಪಡಿಸಿದರು.

ಈ ಬಾರಿಯ ಬಜೆಟ್ ನಲ್ಲಿ ಏನೆಲ್ಲ ಇದೆ..!?

1. ರಥಬೀದಿಯಲ್ಲಿ ನೂತನ ವಾಣಿಜ್ಯ ಕಟ್ಟಡ ನಿರ್ಮಾಣ:

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯ ಕುಶಾವತಿಯಿಂದ ಕೊಪ್ಪಸರ್ಕಲ್‌ವರೆಗೆ ರಸ್ತೆ ಅಗಲೀಕರಣದಿಂದ ಕೆಲವೊಂದು ಮಳಿಗೆಗಳನ್ನು ತೆರವುಗೊಳಿಸಿದ್ದು, ಇದರಿಂದ ಕೆಲವೊಂದು ಉದ್ದಿಮೆದಾರರಿಗೆ ಅನುಕೂಲವಾಗುವಂತೆ ಮತ್ತು ಪಟ್ಟಣ ಪಂಚಾಯಿತಿಯ ಸ್ವಯಂ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲು ರಥಬೀದಿಯಲ್ಲಿ ನೂತನ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ರೂ.100.00 ಲಕ್ಷವನ್ನು ಕಾಯ್ದಿರಿಸಲಾಗಿರುತ್ತದೆ.


2.ಹಿಂದೂ ರುದ್ರಭೂಮಿಯಲ್ಲಿ ಸ್ನಾನಗೃಹ ನಿರ್ಮಾಣ:

ತೀರ್ಥಹಳ್ಳಿ ನಾಗರೀಕರಿಗೆ ಅನುಕೂಲಕ್ಕಾಗಿ ಚಿತಗಾರದಲ್ಲಿ ಶವ ಸಂಸ್ಕಾರದ ನಂತರದ ಇತ್ಯಾದಿಗಳನ್ನು ಕಾರ್ಯಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಹಿಂದೂ ರುದ್ರಭೂಮಿಯಲ್ಲಿ ಸ್ನಾನಗೃಹ ನಿರ್ಮಾಣ ಮಾಡಲು ಈ ಆಯ-ವ್ಯಯದಲ್ಲಿ ರೂ.10.00 ಲಕ್ಷವನ್ನು
ಕಾಯ್ದಿರಿಸಲಾಗಿರುತ್ತದೆ.

3. ಸೀಬಿನಕೆರೆ ಕೆರೆಯಲ್ಲಿ ಹೂಳೆತ್ತಿ ವಾಕಿಂಗ್ ಟ್ರಾಕ್ ನಿರ್ಮಾಣ:

ತೀರ್ಥಹಳ್ಳಿ ಪಟ್ಟಣದ ಅಂದವನ್ನು ಹೆಚ್ಚಿಸುವ ಉದ್ದೇಶದಿಂದ ಸೀಬಿನಕೆರೆ ಕೆರೆಯಲ್ಲಿರುವ ಹೂಳನ್ನು ಎತ್ತಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಾಕಿಂಗ್ ಟ್ರಾಕ್ ನಿರ್ಮಾಣ ಮಾಡಲು ಈ ಆಯ-ವ್ಯಯದಲ್ಲಿ ರೂ.150.00 ಲಕ್ಷವನ್ನು ಕಾಯ್ದಿರಿಸಲಾಗಿರುತ್ತದೆ.

4. ಪಾರ್ಕ್ ಅಭಿವೃದ್ಧಿ ಕಾಮಗಾರಿಗಳು/ ಆಟಿಕೆಗಳ ಅಳವಡಿಕೆ:

ಪಟ್ಟಣದ ವ್ಯಾಪ್ತಿಯಲ್ಲಿರುವ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿ ಅಗತ್ಯ ಆಟಿಕೆಗಳನ್ನು ಅಳವಡಿಸಲು
ಈ ಆಯ-ವ್ಯಯದಲ್ಲಿ ರೂ.25.00 ಲಕ್ಷವನ್ನು ಕಾಯ್ದಿರಿಸಲಾಗಿರುತ್ತದೆ.

5. ಪಟ್ಟಣದಲ್ಲಿ ಈಜು ಕೊಳ ನಿರ್ಮಾಣ :

ತೀರ್ಥಹಳ್ಳಿ ಪಟ್ಟಣದ ಕುಶಾವತಿ ಪಾರ್ಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಈಜುಕೊಳ ನಿರ್ಮಾಣಕ್ಕಾಗಿ ಆಯ ವ್ಯಯದಲ್ಲಿ ರೂ.40.00 ಲಕ್ಷವನ್ನು ಕಾಯ್ದಿರಿಸಲಾಗಿರುತ್ತದೆ.

6. ಬಡಕುಟುಂಬದ ಮಕ್ಕಳಿಗೆ ವಿದ್ಯಾರ್ಥಿ ವೇತನ :

ತೀರ್ಥಹಳ್ಳಿ ಪಟ್ಟಣದಲ್ಲಿರುವ ಅತ್ಯಂತ
ಕಡುಬಡತನದಲ್ಲಿರುವ ಪ್ರತಿಭಾಂತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಈ ಆಯ-ವ್ಯಯದಲ್ಲಿ ರೂ.2.00 ಲಕ್ಷವನ್ನು ಕಾಯ್ದಿರಿಸಲಾಗಿರುತ್ತದೆ.

7.ವಿಕಲ ಚೇತನರಿಗೆ ವಸತಿಗೃಹ ನಿರ್ಮಾಣ :

ತೀರ್ಥಹಳ್ಳಿ ಪಟ್ಟಣಕ್ಕೆ ಚಿಕಿತ್ಸೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಹೊರ ಊರುಗಳಿಂದ ಬಂದ ವಿಕಲ ಚೇತನರ ವಾಸ್ಥವ್ಯಕ್ಕಾಗಿ ವಸತಿ ಗೃಹ ನಿರ್ಮಾಣಕ್ಕಾಗಿ ಈ ಆಯ-ವ್ಯಯದಲ್ಲಿ ರೂ.50.00 ಲಕ್ಷವನ್ನು ಕಾಯ್ದಿರಿಸಲಾಗಿರುತ್ತದೆ.

8.ಬಿ.ಪಿ.ಎಲ್ ಕಾರ್ಡ್ ಹೊಂದಿದ ಹಿರಿಯ ನಾಗರಿಕರಿಗೆ ಔಷಧಿ ಖರೀದಿಗಾಗಿ ಸಹಾಯ ಧನ:

ತೀರ್ಥಹಳ್ಳಿ ಪಟ್ಟಣದಲ್ಲಿ ಬಿ.ಪಿ.ಎಲ್. ಕಾರ್ಡ್ ಹೊಂದಿದ ಹಿರಿಯ ನಾಗರೀಕರಿಗೆ ಆರೋಗ್ಯ ಹಿತದೃಷ್ಟಿಯಿಂದ ಔಷಧಿಗಳನ್ನು ಖರೀದಿಸಲು ಸಹಾಯವಾಗುವಂತೆ ಈ ಆಯ-ವ್ಯಯದಲ್ಲಿ ರೂ.5.00 ಲಕ್ಷವನ್ನು
ಕಾಯ್ದಿರಿಸಲಾಗಿರುತ್ತದೆ.

9.ಪೌರಕಾರ್ಮಿಕರಿಗೆ ಸುರಕ್ಷಾ ಧರಿಸು :

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪ್ರವಾಸ, ಸುರಕ್ಷಾ ಧರಿಸು, ಪೌರಕಾರ್ಮಿಕರ ದಿನಾಚರಣೆ ಆಚರಣೆಗಾಗಿ ಈ ಆಯ-ವ್ಯಯದಲ್ಲಿ ರೂ 15.00 ಲಕ್ಷ ಕಾಯ್ದಿಸಲಾಗಿದೆ.

10. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಫುಡ್
ನಿರ್ಮಾಣ:

ರಸ್ತೆ ಬದಿಯ ಮತ್ತು ವ್ಯಾಪಾರಿಗಳಿಗೆ ಕೋರ್ಟ್
ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಆಧುನಿಕ ರೀತಿಯಲ್ಲಿ ಫುಡ್‌ಕೋರ್ಟ್ ನಿರ್ಮಾಣ ಮಾಡಲು ಈ ಆಯ-ವ್ಯಯದಲ್ಲಿ ರೂ.100.00 ಲಕ್ಷವನ್ನು
ಕಾಯ್ದಿರಿಸಲಾಗಿರುತ್ತದೆ.

11. ಅಂಬೇಡ್ಕರ್ ಭವನ ಅಭಿವೃದ್ಧಿ :

ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ ಬಡಾವಣೆಯಲ್ಲಿರುವ ಅಂಬೇಡ್ಕ‌ರ್ ಭವನವು ಈಗಾಗಲೇ ಶಿಥಿಲಗೊಂಡಿದ್ದು ನವೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದುವರೆದ ಕಾಮಗಾರಿ ಕಾಂಪೌಂಡ್ ಮತ್ತು ಇಂಟರ್‌ಲಾಕ್‌ ಕಾಮಗಾರಿಗೆ ರೂ 30.00 ಲಕ್ಷವನ್ನು
ಕಾಯ್ದಿರಿಸಲಾಗಿದೆ. 

12. ರಸ್ತೆ, ಚರಂಡಿ ಇತ್ಯಾದಿ ಅಭಿವೃದ್ಧಿ ಕಾಮಗಾರಿ : 

ತೀರ್ಥಹಳ್ಳಿ ಪಟ್ಟಣದ ಅಭಿವೃದ್ಧಿಗಾಗಿ ರಸ್ತೆ, ಚರಂಡಿ ಇತ್ಯಾದಿ ಕಾಮಗಾರಿಗಳಿಗಾಗಿ ಪ್ರತಿ ವಾರ್ಡ್ ಗೆ ತಲಾ  10.00 ಲಕ್ಷದಂತೆ ಅನುದಾನವನ್ನ ಕಾಯ್ದಿರಿಸಲಾಗಿದೆ.

ಇನ್ನುಳಿದಂತೆ 2025-26 ನೇ ಸಾಲಿನ ಅಯ - ವ್ಯಯದಲ್ಲಿ ಕಾರ್ಯಗತವಾಗದೆ ಇರುವ ಯೋಜನೆಗಳನ್ನು ಮುಂದುವರೆಸಲಾಗಿದೆ..

* ಪಟ್ಟಣದ ಮುಖ್ಯ ಸರ್ಕಲಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ರೂ 15.00 ಲಕ್ಷ 

* ವ್ಯಾಯಾಮ ಶಾಲೆ ಪರಿಕರಣಗಳ ಖರೀದಿಗಾಗಿ ರೂ 10 ಲಕ್ಷ 

* ಪಟ್ಟಣ ಪಂಚಾಯಿತಿ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ವಸತಿ ಗೃಹ ನಿರ್ಮಾಣ 100. 00ಲಕ್ಷ 

 * ಕುರುವಳ್ಳಿ ತುಂಗಾ ನದಿ ತೀರದಲ್ಲಿ ಪಬ್ಲಿಕ್ ಪಾರ್ಕ್, ಕಚೇರಿ ಆವರಣದಲ್ಲಿ ಪಟ್ಟಣ ಪಂಚಾಯಿತಿ ಕ್ಯಾಂಟೀನ್, ಕುಶಾವತಿ ಪಾರ್ಕಿನಲ್ಲಿ ಪಟ್ಟಣ ಪಂಚಾಯಿತಿ ಕ್ಯಾಂಟೀನ್ ನಿರ್ಮಾಣ ರೂ 8.00 ಲಕ್ಷ 

 * ಫುಡ್ ಕೋರ್ಟ್ ನಿರ್ಮಾಣಕ್ಕಾಗಿ ರೂ 50. 00 ಲಕ್ಷ 

* ಗಾಂಧಿ ಚೌಕದ ಬಳಿ ಅಶೋಕ ಸ್ತಂಭ ನಿರ್ಮಾಣಕ್ಕಾಗಿ ರೂ 15. 00 ಲಕ್ಷ 

ಹೀಗೆ ಹಲವು ಕಾಮಗಾರಿಗಳಿಗೆ ಈ ಬಾರಿಯ ಬಜೆಟ್ ಮಂಡನೆಯಲ್ಲಿ ರೂಪುರೇಷೆ ಮಾಡಿಕೊಳ್ಳಲಾಗಿದೆ.. 







Previous Post Next Post