ಅಣ್ಣಯ್ಯ ಗೌಡ ಲೇಔಟ್ ನಲ್ಲಿ ಚರಂಡಿಗಳು ಬ್ಲಾಕ್ - ಸಾರ್ವಜನಿಕರ ಮನವಿಗೆ ಸ್ಪಂದಿಸದ ಪಟ್ಟಣ ಪಂಚಾಯತ್..!? Muncipal

ಅಣ್ಣಯ್ಯ ಗೌಡ ಲೇಔಟ್ ನಲ್ಲಿ ಚರಂಡಿಗಳು ಬ್ಲಾಕ್ - ಸಾರ್ವಜನಿಕರ ಮನವಿಗೆ ಸ್ಪಂದಿಸದ ಪಟ್ಟಣ ಪಂಚಾಯತ್..!?

ತೀರ್ಥಹಳ್ಳಿ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲವು ಕಡೆಗಳಲ್ಲಿ ಡ್ರೈನೇಜ್ ಅವ್ಯವಸ್ಥೆಯಿಂದಾಗಿ ಚರಂಡಿ ಬ್ಲಾಕ್ ಆಗಿ ದಿನಗಟ್ಟಲೇ ರಸ್ತೆಗಳ ಮೇಲೆ ನೀರು ಹರಿಯುತ್ತ ದುರ್ವಾಸನೆಯಿಂದ ಕೂಡಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಪಟ್ಟಣದ ಅಣ್ಣಯ್ಯ ಗೌಡ ಲೇಔಟ್ ನದ್ದಾಗಿದೆ.

ಪಟ್ಟಣದ ವಾರ್ಡ್ ನಂಬರ್ 5 ರ  ಅಣ್ಣಯ್ಯ ಗೌಡ ಲೇಔಟ್‌ನಲ್ಲಿ ಡ್ರೈನೇಜ್ ಅವ್ಯವಸ್ಥೆಯಿಂದಾಗಿ ಕೊಳಚೆ ನೀರು ಹೊರಬರುವ ಮೂಲಕ ಪರಿಸರ ಸಂಪೂರ್ಣ ದುರ್ವಾಸನೆಯಿಂದ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇಲ್ಲಿನ ಡ್ರೈನೇಜ್‌ ನಿಂದ ಹೊರಬರುವ ಕೊಳಚೆ ನೀರು ರಸ್ತೆಯ ಉದ್ದಗಲಕ್ಕೂ ಹರಿಯುತ್ತಿದ್ದು ಸ್ಥಳೀಯರು ಮೂಗು ಮುಚ್ಚಿಕೊಂಡು ಅನಾರೋಗ್ಯ ಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಇಲ್ಲಿ ಓಡಾಡುವ ಸ್ಥಳೀಯರು ಮಾಸ್ಕ್‌ ಧರಿಸಿಯೇ ಓಡಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಆರೋಗ್ಯಕ್ಕೆ ಮಾರಕವಾದ ಸೊಳ್ಳೆಗಳ ಉತ್ಪತ್ತಿಸುವ
ಕಾರ್ಖಾನೆಯಂತಾಗಿದೆ. ಜನರಿಗೆ ಡೆಂಗ್ಯೂ, ಮಲೇರಿಯಾ ಜ್ವರದಂತಹ ಬಾಧೆಗಳ ಭೀತಿಯನ್ನು ಎದುರಿಸುತ್ತಿದ್ದಾರೆ. ಈ ಲೇಔಟ್ ನಲ್ಲಿ ಚರಂಡಿ ಅವ್ಯವಸ್ಥೆಯಿಂದ ವಾಕರಿಕೆ ತರಿಸುವ ಅಸಹ್ಯ ವಾಸನೆಯಿಂದಾಗಿ, ಆಹಾರವನ್ನೂ ಸೇವಿಸಲಾಗದ
ಸ್ಥಿತಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಣ್ಣಯ್ಯ ಗೌಡ ಲೇಔಟ್‌ನ ಮುಖ್ಯರಸ್ತೆಯಲ್ಲಿ ದುರ್ವಾಸನೆ ಬರುತ್ತಿರುವುದನ್ನು ಅಧಿಕಾರಿಗಳು ಗಮನಿಸಿ ಈ ಸಮಸ್ಯೆ ಬಗ್ಗೆ ಶೀಘ್ರ ಸ್ಪಂದಿಸಿ ಪರಿಹಾರ ನೀಡುವಂತೆ ಸ್ಥಳೀಯರು ಪಟ್ಟಣ ಪಂಚಾಯತಿಯನ್ನ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ  ಚರಂಡಿ ವ್ಯವಸ್ಥೆಯನ್ನು ಪೂರ್ಣಪ್ರಮಾಣದಲ್ಲಿ ವ್ಯವಸ್ಥಿತವಾಗಿ ನಡೆಸಿದರೆ ಮಾತ್ರ ಈ ಸಮಸ್ಯೆ ಪರಿಹಾರವಾಗಿತ್ತದೆ ಎಂಬುದು ನಾಗರಿಕರ ಸಲಹೆಯಾಗಿದೆ.






Previous Post Next Post