ಜಯಚಾಮರಾಜೇಂದ್ರ ಆಸ್ಪತ್ರೆಗೆ ಟೇಬಲ್ ಫ್ಯಾನ್ ಹಸ್ತಾಂತರ Jc Hospaital

ಜಯಚಾಮರಾಜೇಂದ್ರ ಆಸ್ಪತ್ರೆಗೆ ಟೇಬಲ್ ಫ್ಯಾನ್ ಹಸ್ತಾಂತರ

ತೀರ್ಥಹಳ್ಳಿ : ಪಟ್ಟಣದ ಸರ್ಕಾರಿ ಆಸ್ಪತ್ರೆಯಾಗಿರುವ ಜಯಚಾಮರಾಜೇಂದ್ರ ಆಸ್ಪತ್ರೆಗೆ ನವದುರ್ಗ ಬಸ್ ಮಾಲೀಕರಾದ ಅಭಿನಂದನ್ ಶಣೈ ಅವರು ಟೇಬಲ್ ಫ್ಯಾನ್ ಗಳನ್ನು ಹಸ್ತಾಂತರ ಮಾಡಿದರು..

ನೂರಕ್ಕೂ ಹೆಚ್ಚು ಬೆಡ್ ಗಳನ್ನು ಹೊಂದಿರುವ ಆಸ್ಪತ್ರೆಗೆ 
ಜಯಕರ್ನಾಟಕ ಸಂಘಟನೆಯ ಅಧ್ಯಕ್ಷರು, ಆಸ್ಪತ್ರೆಯ ರಕ್ಷಾ ಸಮಿತಿಯ ಸದಸ್ಯರಾದ ಕುರುವಳ್ಳಿ ನಾಗರಾಜ್ ಅವರು ಆಸ್ಪತ್ರೆಗೆ ಬೇಕಾಗುವ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದು, ಈಗ ಅವರು ಆಸ್ಪತ್ರೆಗಾಗಿ ಫ್ಯಾನ್ ಬೇಕಾಗಿದೆ. ಬೇಸಿಗೆ ಕಾಲ ಆಗಿರುವುದರಿಂದ ರೋಗಿಗಳಿಗೆ ಫ್ಯಾನ್ ಅವಶ್ಯಕತೆ ಇದೆ. ಹಾಗಾಗಿ ಕೊಡುಗೆಯನ್ನು ಕೇಳಿದಾಗ ನವದುರ್ಗ ಬಸ್ ಮಾಲೀಕರಾದ ಅಭಿನಂದನ್ ಶಣೈ ನೀಡಿದ್ದಾರೆ ಎಂದರು.

ರಕ್ಷಾ ಸಮಿತಿ ಸದಸ್ಯರಾದ ಪೂರ್ಣಿಮ ಅವರು ಮಾತನಾಡಿ ಆಸ್ಪತ್ರೆಯಲ್ಲಿ ಸಮಸ್ಯೆ ಆದರೆ ಮೊದಲು ಬರುವುದೇ ನಾಗರಾಜ್, ಇಂದು ಟೇಬಲ್ ಫ್ಯಾನ್ ನೀಡುತ್ತಿರುವುದು ಬಹಳ ಸಂತೋಷ ಆಗಿದೆ.  ಯಾರಿಗೆ ರಕ್ತ ಬೇಕು ಎಂದರು ಮೊದಲು ಸಹಾಯಕ್ಕೆ ನಿಲ್ಲುತ್ತಾರೆ. ಈಗಾಗಲೇ ಹಲವು ಸಾಮಾಜಿಕ ಕೆಲಸದಲ್ಲಿ ಭಾಗಿಯಾಗಿ ಒಳ್ಳೊಳ್ಳೆ ಕೆಲಸ ಮಾಡುತ್ತಿರುವ ನಾಗರಾಜ್ ಅವರು ಈಗ ಆಸ್ಪತ್ರೆಗೆ ಟೇಬಲ್ ಫ್ಯಾನ್ ಗಳನ್ನು ಕೊಡುಗೆಯಾಗಿ ತಂದಿರುವುದು ನಿಜವಾಗಿಯೂ ಸಂತೋಷ ಆಗುತ್ತದೆ ಎಂದರು.

ಡಾ. ಅರವಿಂದ್ ಮಾತನಾಡಿ ಆಸ್ಪತ್ರೆಯಲ್ಲಿ ಕೆಲವು ನ್ಯೂನ್ಯತೆ ಇದ್ದಾವೆ. ಅದನ್ನು ಸರಿಪಡಿಸುತ್ತಿದ್ದೇವೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಅತೀ ಹೆಚ್ಚು ರೋಗಿಗಳು ಬರುವುದರಿಂದ ವೈದ್ಯರಿಗೂ ಒತ್ತಡ ಇರುತ್ತದೆ. ಆ ಸಮಯದಲ್ಲಿ ಏನಾದರು ಸಮಸ್ಯೆ ಆಗಿರಬಹುದು ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಆಸ್ಪತ್ರೆಯಲ್ಲಿ ಲ್ಯಾಬ್ ಸಮಸ್ಯೆ ಇದೆ. ಒಂದೇ ಮಿಷನ್ ಇರುವುದರಿಂದ ಕೆಲವೊಮ್ಮೆ ಹಾಳಾಗುತ್ತಿರುತ್ತದೆ. ಆ ಸಮಯದಲ್ಲಿ ಬೇರೆ ಕಡೆ ಕಳುಹಿಸಲಾಗುತ್ತದೆ. ಅದನ್ನು ಹೊರತು ಪಡಿಸಿ ಇಲ್ಲಿಯೇ ಟೆಸ್ಟ್ ಮಾಡಲಾಗುತ್ತಿದೆ ಎಂದರು..

ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ. ಅರವಿಂದ್, ರಕ್ಷಾ ಸಮಿತಿ ಸದಸ್ಯರಾದ ಪೂರ್ಣಿಮ, ವಾಸುದೇವ್ ಕಾಮತ್, ಕುರುವಳ್ಳಿ ನಾಗರಾಜ್, ಶ್ರೇಯಸ್, ಪ. ಪಂ ಸದಸ್ಯರಾದ ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ
ಕರ್ನಾಟಕ ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಎಂ,ಬೆಟ್ಟಮಕ್ಕಿ ಅಂಜನ್ ಹೆಗಡೆ ಖಜಾಂಚಿ ಅರ್ಜುನ್ ಗೌಡ ಮಾಳೂರು, ಕವಿರಾಜ್ ಮೇಗರವಳ್ಳಿ ನಗರ ಘಟಕದ ಅಧ್ಯಕ್ಷರಾದ ಮಹೇಶ್ ಬೆಟ್ಟಮಕ್ಕಿ ನಗರ ಹೋಬಳಿ ಅಧ್ಯಕ್ಷರು ಸನತ್ ಗೌಡ, ಸುಶಾಂತ್ ಮಿಲ್ಕೇರಿ, ರಂಜಿತ್ ಶೆಟ್ಟಿ ಬಾಳೆಬೈಲ್ ರಾಜೇಶ್ ಮೊಗವೀರ  ಸೇರಿ ಹಲವರು ಉಪಸ್ಥಿತರಿದ್ದರು.






Previous Post Next Post