ಗಾಜನೂರಿನಲ್ಲಿ ರಸ್ತೆ ಅಪಘಾತ - ಓರ್ವ ವ್ಯಕ್ತಿ ಸಾವು..!
ಶಿವಮೊಗ್ಗ : ಗಾಜನೂರು ಬಳಿ ಭೀಕರ ರಸ್ತೆ ಅಪಘಾತ ಉಂಟಾಗಿದ್ದು, ಅಪಘಾತದಲ್ಲಿ ಡಿಸಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಟೈಪಿಸ್ಟ್ ಆಗಿದ್ದ ನೌಕರ ಸಾವು ಕಂಡಿದ್ದಾರೆ.
ಮಂಗಳೂರಿನಿಂದ ಬರುತ್ತಿದ್ದ m ಖಾಸಗಿ ಬಸ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದೆ. ಗಾಜನೂರು ಮುರಾರ್ಜಿ ದೇಸಾಯಿ ವಸತಿ ಶಾಲೆ ಕ್ರಾಸ್ ಬಳಿಯ ವನಶ್ರೀ ನರ್ಸರಿ ಬಳಿ ಅಪಘಾತ ನಡೆದಿದೆ.
ಶಿವಮೊಗ್ಗದಿಂದ ಗಾಜನೂರು ಕಡೆಗೆ ಹೋಗುತ್ತಿದ್ದ ಆಟೋದಲ್ಲಿ ಪ್ರೇಮ್ ಕುಮಾರ್ (28), ಮನೋಜ್ (21), ಪವನ್(21) ಹಾಗೂ ಗಿರೀಶ್ ಎಂಬ (21) ವರ್ಷದ ಯುವಕರು ಚಲಿಸುತ್ತಿದ್ದರು. ಎದುರಿನಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಶಿವಮೊಗ್ಗ ಬುದ್ಧನಗರದ ಪ್ರೇಮ್ ಕುಮಾರ್ ಮೃತ ದುರ್ದೈವಿಯಾಗಿದ್ದಾರೆ.
ಇನ್ನುಳಿದ ಮೂವರು ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ..
Tags:
ಅಪಘಾತ ಸುದ್ದಿ