ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಇಂಟೆಕ್ ವಿಭಾಗದ ಅಧ್ಯಕ್ಷರಾಗಿ ಶ್ರೀಕಾಂತ್ ಎಂ ಬೆಟ್ಟಮಕ್ಕಿ ಆಯ್ಕೆ
ತೀರ್ಥಹಳ್ಳಿ: ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಇಂಟೆಕ್ ವಿಭಾಗದ ಅಧ್ಯಕ್ಷರಾಗಿ ಶ್ರೀಕಾಂತ್ ಎಂ ಬೆಟ್ಟಮಕ್ಕಿ ಕಾರ್ಯಾಧ್ಯಕ್ಷರಾಗಿ ಶನತ್ ಗೌಡ ಕೊಳವಾಡಿ ತೀರ್ಥಹಳ್ಳಿ ಟೌನ್ ಅಧ್ಯಕ್ಷರಾಗಿ ನಾಗೇಶ್ ಗುಂಡ ಕುರುವಳ್ಳಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಜಯಂತ್ ಗೌಡ ಮೀನ್ಗುಂದ ಕೌಶಿಕ್ ಭಂಡಾರಿ ವಸುವೆ ಸುದರ್ಶನ್ ಕನ್ನಂಗಿ ಲಾಯರ್ಡ್ ಡಿಸೋಜಾ ಮಾಸ್ತಿಕಟ್ಟೆ ಸಂಘಟನಾ ಕಾರ್ಯದರ್ಶಿಯಾಗಿ ಅಂಜನ್ ಹೆಗ್ಡೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಕೆಳಕೆರೆ ಗೂಗ್ಲಿ ಅಕ್ಷಯ ನಾಯಕ್ ಬಾಗೋಡ್ ಕಸಬಾ ಹೋಬಳಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಕೆ ಮೇಲಿನಕುರವಳ್ಳಿ ಮುತ್ತೂರ್ ಹೋಬಳಿ ಅಧ್ಯಕ್ಷರಾಗಿ ಮಹೇಶ್ ಗೌಡ ಶೇಡ್ಗಾರ್ ಅಗ್ರಹಾರ ಹೋಬಳಿ ಅಧ್ಯಕ್ಷರಾಗಿ ಶರತ್ ಗೌಡ ಶಿರಿಗಾರ್ ಹುಂಚ ಹೋಬಳಿಯ ಅಧ್ಯಕ್ಷರಾಗಿ ಪ್ರದೀಪ್ ಗರ್ತಿಕೆರೆ ಮಂಡಗದ್ದೆ ಹೋಬಳಿ ಅಧ್ಯಕ್ಷರಾಗಿ ಅರುಣ್ ನಾಯ್ಕ್ ಜಂಬಳ್ಳಿ ಗಾಜನೂರು ಹೋಬಳಿ ಅಧ್ಯಕ್ಷರಾಗಿ ಮಧುಸೂದನ್ ಕೆ.ಆರ್ ಉಂಬ್ಳೆಬೈಲು ಜಿಲ್ಲಾ ಉಪಾಧ್ಯಕ್ಷರಾಗಿ ರಂಜಿತ್ ಕುಮಾರ್ ಏನ್ ಕೋಡೂರು ಇವರುಗಳನ್ನ ಜಿಲ್ಲಾ ಯುವ ಕಾಂಗ್ರೆಸ್ ಇಂಟೆಕ್ ವಿಭಾಗದ ಅಧ್ಯಕ್ಷರಾದ ಸಂತೋಷ್ ಕುಮಾರ್ ಅವರು ತೀರ್ಥಹಳ್ಳಿ ಕಾಂಗ್ರೆಸ್ ನಾಯಕರಗಳಾದ ಶ್ರೀ ಕಿಮ್ಮನೆ ರತ್ನಾಕರ್ ಹಾಗೂ ಶ್ರೀ ಡಾ ಆರ್ ಎಂ ಮಂಜುನಾಥ್ ಗೌಡ ಮಾರ್ಗದರ್ಶನದಲ್ಲಿ ಆದೇಶಿಸಿದ್ದಾರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ ಕುಮಾರ್ ರವರು ರಾಜ್ಯ ಕಾಂಗ್ರೆಸ್ ನಾಯಕರ ಎಂ ಶ್ರೀಕಾಂತ್ ಅವರು ಜಿಲ್ಲಾ ಇಂಟಕ್ ಅಧ್ಯಕ್ಷರಾದ ಮುಕುಲ್ ಭಾಷಾ ಅವರು ಮಾಜಿ ಉಪಮೇಯರಾದ ಪಾಲಾಕ್ಷಿ ಜಿಲ್ಲಾ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಯುವ ಸಂಘಟನೆಯ ಉಸ್ತುವಾರಿಯಾಗಿರುವ ಕುರುವಳ್ಳಿ ನಾಗರಾಜ್ ಹಿರಿಯ ಕಾಂಗ್ರೆಸ್ ಮುಖಂಡರಾದ ಶೇಷಾದ್ರಿ ಅವರುಗಳು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಆದೇಶ ಪತ್ರಗಳನ್ನ ನೀಡಿ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳನ್ನ ಕಾರ್ಮಿಕರಿಗೆ ತೀರ್ಥಹಳ್ಳಿ ಇಂಟೆಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರೇಮ್ ಯಡೂರು ಅವರೊಂದಿಗೆ ಜೊತೆಯಾಗಿ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್ ಮತ್ತು ಮೂಡುವ ರಾಘವೇಂದ್ರ ಅವರ ಸಲಹೆಯನ್ನ ಪಡೆದು ಅಗತ್ಯ ಸಂದರ್ಭದಲ್ಲಿ ಪಕ್ಷದ ಎಲ್ಲಾ ಘಟಕಗಳ ಸಹಕಾರದಲ್ಲಿ ತೀರ್ಥಳ್ಳಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಸಂಘಟನೆಗೆ ತಾವೆಲ್ಲರೂ ಶ್ರಮವಹಿಸಬೇಕೆಂದು ಶುಭ ಹಾರೈಸಿದರು.
Tags:
ಕಾಂಗ್ರೆಸ್ ಸುದ್ದಿ