ಮಂಡಗದ್ದೆ-ಗಾಜನೂರು ನಡುವಿನ ರಸ್ತೆ ಸಂಪೂರ್ಣ ಹೊಂಡ ಗುಂಡಿ - ಗುಂಡಿ ಮುಚ್ಚಲು ಹಣ ಇಲ್ವಂತೆ! tth shivamogga road

ಮಂಡಗದ್ದೆ-ಗಾಜನೂರು ನಡುವಿನ ರಸ್ತೆ ಸಂಪೂರ್ಣ ಹೊಂಡ ಗುಂಡಿ - ಗುಂಡಿ ಮುಚ್ಚಲು ಹಣ ಇಲ್ವಂತೆ!

ತೀರ್ಥಹಳ್ಳಿ : ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗದ  ಮಂಡಗದ್ದೆ-ಗಾಜನೂರು ನಡುವಿನ ಸಕ್ರೆಬೈಲು ಕಾಡಿನ ರಸ್ತೆಯಲ್ಲಿ ಬಹಳಷ್ಟು ಕಡೆ ಹೊಂಡಗಳು ಬಿದ್ದಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಾಗಿ ಬರುವ ವಾಹನಗಳು ಅಚಾನಕ್ ಎದುರಾಗುವ ಗುಂಡಿಗಳಿಂದ ಅಪಘಾತಕ್ಕೀಡಾಗುತ್ತಿವೆ. 

ಹೊಂಡಕ್ಕೆ ಚಕ್ರ ಇಳಿದು ಟೈರ್‌ಗಳು ಬ್ಲಾಸ್ಟ್‌ ಆಗುತ್ತಿವೆ. ಸಡನ್ ಬ್ರೇಕ್ ಹಾಕುವುದರಿಂದ ಅಪಘಾತಗಳಾಗುತ್ತಿವೆ. ಹೊಂಡ ತಪ್ಪಿಸುವ ಭರದಲ್ಲಿ ವಾಹನಗಳು ಮಗುಚಿಕೊಳ್ಳುತ್ತಿವೆ. ಪ್ರತಿನಿತ್ಯ ಇಲ್ಲಿ ಕನಿಷ್ಟ 10-15 ಅಪಘಾತಗಳಾಗುತ್ತಿವೆ. ಟೈರ್ ಪಂಕ್ಚರ್ ಆಗಿ
ಸಮಸ್ಯೆಗಳಾಗುತ್ತಿವೆ. ನಿತ್ಯ ಈ ಮಾರ್ಗದಲ್ಲಿ ಓಡಾಡುವವರಿಗೆ ಮಾಹಿತಿ ಇರುತ್ತದೆ. ಹೊರಗಿನಿಂದ ಬರುವವರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಕ್ಕೀಡಾಗುತ್ತಿದೆ.

ಗುಂಡಿ ಮುಚ್ಚಲು ಹಣ ಇಲ್ವಂತೆ- ಹಣಕ್ಕಾಗಿ ಕಾಯ್ತಾ ಇದ್ರೆ ಹೆಣ ಬೀಳೋದು ಪಕ್ಕ..!

ಇಲ್ಲಿನ ರಸ್ತೆ ದುರವಸ್ಥೆ ಬಗ್ಗೆ ತೀರ್ಥಹಳ್ಳಿಯ ಬಸ್ ಮಾಲೀಕರ ಸಂಘದವರು, ಪ್ರವಾಸಿ ವಾಹನ ಮಾಲೀಕರ
ಸಂಘದವರೆಲ್ಲರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಶಿವಮೊಗ್ಗ ವಿಭಾಗದ ಇಂಜಿನಿಯರ್ ಗೆ ಮಾಹಿತಿ ನೀಡಿ  ರಸ್ತೆ
ದುರಸ್ಥಿ ಮಾಡಿಸಿ ಅಪಘಾತ ತಪ್ಪಿಸಿ ಎಂದು ಮನವಿ ಮಾಡಿದರೆ ಇಂಜಿನಿಯರ್ 'ರಿಪೇರಿ ಮಾಡಿಸೋಕೆ ದುಡ್ಡಿಲ್ಲ' ಬೇಕಾದ್ರೆ ಜಲ್ಲಿ ಡಸ್ಟ್ ತುಂಬಿಸುತ್ತೇವೆ ಎಂದಿದ್ದಾರಂತೆ.

ಪ್ರತಿನಿತ್ಯ ಈ ರಸ್ತೆಯಲ್ಲಿ ವಾಹನಗಳು ಅಪಘಾತಕ್ಕಿಡಾಗುತ್ತಿವೆ. ಈ ಕಾರಣದಿಂದ ಶಾಸಕ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ ಅವರಾದರೂ ಅಪಾಯಕಾರಿ ತಿರುವುಗಳನ್ನು ಹೊಂದಿರುವ
ಈ ರಸ್ತೆಯ ದುರಸ್ಥಿ ಬಗ್ಗೆ ಆಸಕ್ತಿ ವಹಿಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
Previous Post Next Post