ತೀರ್ಥಹಳ್ಳಿಯಲ್ಲಿ ಬಾಣಂತಿ ಸಾವು..! tth

ತೀರ್ಥಹಳ್ಳಿಯಲ್ಲಿ ಬಾಣಂತಿ ಸಾವು..!

ತೀರ್ಥಹಳ್ಳಿ : ಏಕಾಏಕಿ ಬಾಣಂತಿಯೊಬ್ಬರಿಗೆ ಕಾಲು ನೋವು ಕಂಡು ಬಂದಿದ್ದು ಕುಟುಂಬಸ್ಥರು ಆಂಬುಲೆನ್ಸ್ ಗೆ ಕರೆ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಆದರೆ ನೆಟ್ವರ್ಕ್ ಸಮಸ್ಯೆಯಿಂದ ಸಿಗಲಿಲ್ಲ. ಕಾರಿನಲ್ಲಿ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.

ಕಾವ್ಯ 29 ವರ್ಷ ಮೃತಪಟ್ಟ ದುರ್ದೈವಿ. ಜನವರಿ 1 ರಂದು ಮಹಿಳೆಗೆ ಮಗು ಜನಿಸಿತ್ತು. ಆದರೆ ಮಗು ಸಹ ಸಾವನ್ನಪ್ಪಿತ್ತು. ಈ ವೇಳೆ ತಾಯಿ ಆರೋಗ್ಯದ ಬಗ್ಗೆ ಮಾನಸಿಕವಾಗಿ ಏನಾದರು ಸಮಸ್ಯೆ ಆಗಿತ್ತಾ? ಎಂಬ ಪ್ರೆಶ್ನೆ ಇದೆ. ತಾಲೂಕಿನ ಮೇಳಿಗೆ ಪೋಸ್ಟ್ ಮಾಸ್ಟರ್ ಮಂಜುನಾಥ್ ಅವರ ಧರ್ಮಪತ್ನಿ ಕಾವ್ಯ ಹೆರಿಗೆ ನಂತರ ಕೋಣಂದೂರು ಸಮೀಪದ ದೇಮ್ಲಾಪುರ ಬಳಿ ಹೋಗಿದ್ದರು. ಆದರೆ ಇಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಸಾವನ್ನಪ್ಪಿದ್ದಾರೆ.

ಸ್ಥಳೀಯ ಆರೋಗ್ಯ ಇಲಾಖೆ ನಿರ್ಲಕ್ಷ್ಯ?

ಕೋಣಂದೂರು ಸಮೀಪದ ದೇಮ್ಲಾಪುರ ಎಂಬ ಗ್ರಾಮದ ಚಿಕ್ಕನಹಳ್ಳಿಯಲ್ಲಿ ಕಾವ್ಯ ತನ್ನ ತವರು ಮನೆಯಲ್ಲಿ ಇದ್ದರು. ಈ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರು ಅಥವಾ ಸಂಬಂಧಪಟ್ಟಂತಹ ಅಧಿಕಾರಿಗಳು ಮನೆಗೆ ಭೇಟಿ ನೀಡದೆ ಪರಿಶೀಲನೆ ನಡೆಸದೆ ಇರುವುದು ಸಹ ಅವರ ನಿರ್ಲಕ್ಷ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.

ತಹಸೀಲ್ದಾರ್ ಹೇಳಿದ್ದೇನು?

ಮದುವೆಯಾಗಿ 7 ವರ್ಷಗಳ ಆ ಹೆಣ್ಣು ಮಗಳು ಮರಣ ಹೊಂದಿದ್ದರೆ ತಾಲೂಕು ದಂಡಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಆ ವಿಚಾರವಾಗಿ ಇಂದು ಭೇಟಿ ನೀಡಲಾಗಿದೆ. ನಾವು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಆ ಹೆಣ್ಣು ಮಗಳಿದ್ದ ಊರು ಕುಗ್ರಾಮ ಆಗಿದ್ದ ಕಾರಣ ನೆಟ್ವರ್ಕ್ ಸಮಸ್ಯೆ ಹಾಗೂ ಇತರ ಸಮಸ್ಯೆಗಳನ್ನು ಸ್ಥಳೀಯರು ತಿಳಿಸುತ್ತಿದ್ದಾರೆ. ಕೆಲವು ಉಗ್ರಾಮಗಳಲ್ಲಿ ವೈದ್ಯಕೀಯ ವ್ಯವಸ್ಥೆ ಸಹ ಇಲ್ಲದಿರುವ ಕಾರಣದಿಂದ ಇಂತಹ ಘಟನೆ ನಡೆಯುತ್ತದೆ. ಯಾವ ಕಾರಣದಿಂದ ಸಾಬಾಗಿದೆ ಎಂಬುದು ಪೂರ್ಣ ತನಿಖೆಯಿಂದ ತಿಳಿದು ಬರುತ್ತದೆ ಎಂದು ತಿಳಿಸಿದರು..
Previous Post Next Post