ಭಾರತದ ಸ್ವತಂತ್ರ ಸಂಗ್ರಾಮ ಯಶೋಗಾಥೆಯನ್ನು ಯುವ ಪೀಳಿಗೆಗೆ ಸಾರುವುದು ನಮ್ಮೆಲ್ಲರ ಆದ್ಯ ಕರ್ತವ್ಯ - ರಂಜಿತ್ ಎಸ್ Tth Republic Day

ಭಾರತದ ಸ್ವತಂತ್ರ ಸಂಗ್ರಾಮ ಯಶೋಗಾಥೆಯನ್ನು ಯುವ ಪೀಳಿಗೆಗೆ ಸಾರುವುದು ನಮ್ಮೆಲ್ಲರ ಆದ್ಯ ಕರ್ತವ್ಯ - ರಂಜಿತ್ ಎಸ್

ತೀರ್ಥಹಳ್ಳಿ : ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವುದು ಹಾಗೂ ಭಾರತದ ಸ್ವತಂತ್ರ ಸಂಗ್ರಾಮ ಯಶೋಗಾಥೆಯನ್ನು ನಮ್ಮ ಯುವ ಪೀಳಿಗೆಗೆ ಸಾರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಎಲ್ಲರಿಗೂ 77 ನೇ ವರ್ಷದ ಈ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ತಾಲೂಕು ದಂಡಾಧಿಕಾರಿ ರಂಜಿತ್ ಎಸ್ ತಿಳಿಸಿದರು.

ತೀರ್ಥಹಳ್ಳಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ನಮಗೆ 1947 ಆಗಸ್ಟ್ 15 ರಂದು ಸ್ವಾತಂತ್ರ ಸಿಕ್ಕಿದರೂ ಸಹ ಬ್ರಿಟಿಷರು ಬಿಟ್ಟು ಹೋದ ಕಾಯ್ದೆಗಳು, ಪ್ರೀತಿ ರಿವಾಜುಗಳು, ಇನ್ನೂ ಚಾಲ್ತಿಯಲ್ಲಿದ್ದವು. ಹಾಗಾಗಿ ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತಗೊಂಡ ಎರಡು ವರ್ಷಗಳ ನಂತರ ಸಂವಿಧಾನವನ್ನು ಪಡೆದುಕೊಂಡೆವು. 1950 ರ ಜನವರಿ 26 ರಂದು ಸಂವಿಧಾನವು ರಚನೆಗೊಂಡ ನಂತರದಲ್ಲಿ ಆ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವೇಳೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಹಾಗೂ ನಾಲ್ಕು ಮಂದಿಗೆ ಅಕ್ರಮ ಸಕ್ರಮ ಅಡಿಯಲ್ಲಿ ನಿವೇಶನ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಶೈಲಾ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಸದಸ್ಯೆ ಜ್ಯೋತಿ ಮೋಹನ್ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು..

Previous Post Next Post