ಹೊನ್ನೇತಾಳು ಶಾಲೆಯ ಮಕ್ಕಳಿಗೆ ಆಗುಂಬೆ ಪೊಲೀಸ್ ಠಾಣೆ ವತಿಯಿಂದ ತೆರೆದ ಬಾಗಿಲು ಕಾರ್ಯಕ್ರಮ tth

ಹೊನ್ನೇತಾಳು ಶಾಲೆಯ ಮಕ್ಕಳಿಗೆ ಆಗುಂಬೆ ಪೊಲೀಸ್ ಠಾಣೆ ವತಿಯಿಂದ ತೆರೆದ ಬಾಗಿಲು ಕಾರ್ಯಕ್ರಮ
ತೀರ್ಥಹಳ್ಳಿ : ಇತ್ತೀಚಿಗೆ ಪೊಲೀಸ್ ಬಗ್ಗೆ ಕೆಲವು ಮಂದಿ ಅಸಮಾಧಾನ ವ್ಯಕ್ತಪಡಿಸಿದರೆ ಇನ್ನೊಂದಿಷ್ಟು ಜನ ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಾರೆ ಎಂಬ ಮಾತು ಬರುತ್ತದೆ. ಕಾರಣ ಸಾರ್ವಜನಿಕರ ಜೊತೆ ಇರುವ ಪೊಲೀಸರು ಅತ್ಯಂತ ವಿರಳವಾಗಿದ್ದಾರೆ. ಕೆಲಸ ಕಾರ್ಗಿಗಳಿಗಿಂತ ತಮ್ಮ ತಮ್ಮ ಅನುಕೂಲ ನೋಡುವಂತಹ ಅಧಿಕಾರಿಗಳಿರುವುದರಿಂದ ಪೊಲೀಸರ ಬಗ್ಗೆ ಅಸಮಾಧಾನ ಸಹ ವ್ಯಕ್ತವಾಗುತ್ತಿರುವುದು ಸತ್ಯ.

ಇಂತಹ ಸಂದರ್ಭದಲ್ಲಿ ಇತ್ತೀಚಿಗೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮನೆ ಮನೆಗೆ ಪೊಲೀಸ್ ಎಂಬ ವಿಶೇಷವಾದ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಜನರ ಸಮೀಪಕ್ಕೆ ತಾವೇ ಖುದ್ದಾಗಿ ಪೊಲೀಸರು ಹೋಗಿ ಸಮಸ್ಯೆಯನ್ನ ಆಲಿಸಿದ್ದರು. ಈಗ ಇಂತಹದ್ದೇ ಮತ್ತೊಂದು ಕಾರ್ಯಕ್ರಮ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯದರ್ಶಿಸುತ್ತಿರುವ ಶಿವನಗೌಡ ಅವರ ಈ ಒಂದು ವಿಶೇಷ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ .

ಹಾಗಾದರೆ ಆಗುಂಬೆ ಪೊಲೀಸರು ಮಾಡಿದ್ದೇನು..!? ತೆರೆದ ಬಾಗಿಲು ಕಾರ್ಯಕ್ರಮ ಎಂದರೆ ಏನು..!?

ಆಗುಂಬೆ ಸಮೀಪದ ಹೊನ್ನೇತಾಳು ಶಾಲೆಯ ಮಕ್ಕಳನ್ನು ಪೊಲೀಸ್ ಠಾಣೆಗೆ ಬರಮಾಡಿಕೊಂಡ ಪೊಲೀಸರು, ಠಾಣೆಯ ಕಾರ್ಯ ವೈಖರಿ, ಪೋಲೀಸರ ದೈನಂದಿನ ಕರ್ತವ್ಯಗಳು, ಪೊಲೀಸ್ ಠಾಣೆಯಲ್ಲಿ ಬಳಸುವ ಆಯುಧಗಳು, ಮಕ್ಕಳ ಹಕ್ಕುಗಳು, ಮಕ್ಕಳಿಗೆ ಇರುವ ಕಾನೂನುಗಳು, ಇತರೆ ಕಾನೂನಿನ ಅರಿವು ಈ ಎಲ್ಲವನ್ನು ಮೂಡಿಸಲಾಯಿತು. ಪಿಎಸ್ಐ ಶಿವನ ಗೌಡ ಪಾಟೀಲ್  ಮಕ್ಕಳಿಗೆ ಕೂಲಂಕುಶವಾಗಿ ಠಾಣೆಯ ಕುರಿತು ಮಾಹಿತಿ ನೀಡಿದರು. 

2008 ರಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯ ಔಟ್ ಪೋಸ್ಟ್ ಆಗಿ ಆಗುಂಬೆ ಠಾಣೆ ನಿರ್ಮಾಣವಾಯಿತು. PSI,  ಠಾಣಾಧಿಕಾರಿಗಳು ಸೇರಿದಂತೆ 30 ಅಧಿಕಾರಿಗಳು ಈ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇದರಲ್ಲಿ
PSI ಕೊಠಡಿ, ರಿಸೆಪ್ಶನ್, ರೆಕಾರ್ಡ್ ರೂಮ್, ಕಂಪ್ಯೂಟರ್ ಕೊಠಡಿ, ಮಕ್ಕಳ ಸ್ನೇಹಿ ಕೊಠಡಿ, ಮಹಿಳಾ ಬಂದಿಖಾನೆ, ಪುರುಷರ ಬಂದಿಖಾನೆ, ದಾಖಲೆ ಮತ್ತು ಕಡತಗಳ ಕೊಠಡಿ, ಶ್ರಸ್ತ್ರಗಾರ ಕೊಠಡಿ, ಹೀಗೆ ವಿವಿಧ ಕೊಠಡಿಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅಪರಾದಿಗಳ ದಾಖಲೆ ಸಂಗ್ರಹ, FIR, ಅಪರಾಧಿಗಳ ತೀವ್ರತೆ ಆಧರಿಸಿ ಕ್ರಮಜರುಗಿಸುವುದರ ಕುರಿತು ಮತ್ತು ಶ್ರಸ್ತ್ರಗಳ ಬಳಕೆ ಇವುಗಳ ಕುರಿತು ಮಾಹಿತಿ ನೀಡಿದರು. 

ಮನೆಯಲ್ಲಿರುವ ಶಸ್ತ್ರಾಸ್ತ್ರಗಳನ್ನು ಮಕ್ಕಳು ಬಳಸದಂತೆ ಎಚ್ಚರಿಕೆ ನೀಡಿ  ಹಾಗೆ ಪೋಕ್ಸೋ ಕಾಯಿದೆ ಮತ್ತು ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮ , ರಸ್ತೆಯ ಸಂಚಾರಿ ನಿಯಮಗಳ ಕುರಿತು ಮಾಹಿತಿ ನೀಡಿದ್ದಲ್ಲದೆ, ಮಕ್ಕಳ ಪ್ರಶ್ನೆಗಳಿಗೆ ಸಹ ಸಮಂಜಸವಾದ ಉತ್ತರ ನೀಡಿದರು. 
ಪೋಲಿಸ್ ಠಾಣೆ ಬಗ್ಗೆ ಮಕ್ಕಳಲಿದ್ದ ತಪ್ಪು ಕಲ್ಪನೆ ಗಳನ್ನು ದೂರ ಮಾಡಿ  ಮಕ್ಕಳಿಗೆ ಸಿಹಿ ನೀಡಿ ಕಳಿಸಿದರು.

ಆಗುಂಬೆ ಪೊಲೀಸ್ ಠಾಣೆಯ ಪಿಎಸ್ಐ  ಶಿವನ ಗೌಡ ಪಾಟೀಲ್ ಹಾಗು ಸಿಬ್ಬಂದಿ ವರ್ಗದ ಈ ಒಂದು ವಿಶೇಷ ಕಾರ್ಯ ಈಗ ಜನಮನ್ನಣೆ ಪಡೆದಿದೆ. 
Previous Post Next Post