ರೈತರಿಗೆ ಕಿರುಕುಳ ನೀಡದಿದ್ದರೆ ನಿಮಗೆ ತಿಂದ ಅನ್ನ ಜೀರ್ಣ ಆಗುವುದಿಲ್ಲವೇ?- ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ
ತೀರ್ಥಹಳ್ಳಿ : ಅರಣ್ಯ ಇಲಾಖೆಯವರು ರೈತರ ಮೇಲೆ ಕೇಸ್ ಮಾಡುತ್ತಿದ್ದಾರೆ ಇದಕ್ಕೆ ಹೊಣೆ ಯಾರು? ಹಕ್ಕುಪತ್ರ ನೀಡಿದ ತಹಶೀಲ್ದಾರ್ ಅವರನ್ನು ಪಾರ್ಟಿ ಮಾಡಿ ಅವರ ಮೇಲೆ ಕೇಸ್ ದಾಖಲಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ತಂದಿದ್ದ ಕಾಯ್ದೆಯನ್ನು ನಮ್ಮ ಸರ್ಕಾರ ಇದ್ದಾಗ ರದ್ದು ಮಾಡಬೇಕೆಂದು ನಾನೇ ಮಾತನಾಡಿದ್ದೆ, ರೈತರಿಗೆ ಈ ರೀತಿ ಕಿರುಕುಳ ನೀಡದಿದ್ದರೆ ನಿಮಗೆ ತಿಂದ ಅನ್ನ ಜೀರ್ಣ ಆಗುವುದಿಲ್ಲವೇ? ಎಂದು ಅಧಿಕಾರಿಗಳ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು...
ತೀರ್ಥಹಳ್ಳಿಯಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ನಾಟಕೀಯವಾಗಿ ರಾಜಕಾರಣ ಮಾಡುವವರು ಬಹಳಷ್ಟು ಜನರು ಇದ್ದಾರೆ. ನಾನು ಕೂಡ ಬಡತನದ ಬೆಂಕಿಯಿಂದ ಮೇಲೆ ಬಂದವನು, ಒಬ್ಬ ಶಾಸಕನಾದರೂ ನನಗೆ ಸಮಸ್ಯೆ ಅರ್ಥ ಆಗುತ್ತದೆ. ಈ ಸರ್ಕಾರ ಬಂದ ಮೇಲೆ ಮತ್ತೆ ರೈತರ ಮೇಲೆ ಕೇಸ್ ನಡಿತಾ ಇದೆ. ಇವತ್ತು ಆರ್ ಎಫ್ ಓ ಕೇಸ್ ಹಾಕುವುದಂತೆ ಎಂಸಿಎಫ್ ಜಡ್ಜ್ಮೆಂಟ್ ಕೊಡುವುದಂತೆ
ಜನರಿಗೆ ಕಿರುಕುಳ ನೀಡದಿದ್ದರೆ ತಿಂದ ಅನ್ನ ನಿಮಗೆ ಮೈಯಿಗೆ ಹತ್ತುವುದಿಲ್ಲವೇ? ಎಂದು ವಾಗ್ದಾಳಿ ನಡೆಸಿದರು.
ಇನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬಗ್ಗೆ ಮಾತನಾಡಿ ಒಬ್ಬರ ಮನೆಯಲ್ಲಿ ನಾಟಿ ಕೋಳಿಯಂತೆ ಇನ್ನೊಬ್ಬರ ಮನೆಯಲ್ಲಿ ಇನ್ನೊಂದು ಕೋಳಿಯಂತೆ ಇವರಿಗೆ ತಿಂಡಿ ತಿನ್ನುವುದೇ ದೊಡ್ಡ ಸಂಭ್ರಮ. ನೀವು ಮಾಡುವುದನ್ನು ನೋಡಿದರೆ ಇನ್ನೂ ಏನು ತಿನ್ನುತ್ತೀರಿ ಎಂದು ನಮಗೆ ಅರ್ಥ ಆಗುತ್ತಿಲ್ಲ. ನಮ್ಮನ್ನೊಂದು ತಿನ್ನದೇ ಇದ್ದರೆ ಸಾಕು,ನಿಮ್ಮ ಬಾಯಾರಿಕೆ ಹಸಿವು ನಮಗೆ ಗೊತ್ತಿದೆ. ಮಗುವಿಗೆ ಹಾಲು ಕೊಡಬೇಕಾದರೆ ತಾಯಿ ಸೆರಗು ಮುಚ್ಚಿಕೊಂಡು ಕೊಡುತ್ತಾರೆ
ಆದರೆ ನಮ್ಮ ಮಂತ್ರಿಗಳು ನಿರ್ವಾಣವಾಗಿ ನಿಂತಿದ್ದಾರೆ ಎಂದರು.
ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣಸಚಿವರ ಬಗ್ಗೆ ಮಾತನಾಡಿ ನನ್ನ ಹೆಸರಿನಿಂದ ನಮ್ಮ ಅಪ್ಪನ ಪರಿಚಯ ಮಾಡಿಕೊಡಬೇಕು ಆದರೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಅವರ ಅಪ್ಪನ ಹೆಸರಿನಿಂದ ಪರಿಚಯ ಮಾಡುವುದು,
ಹುಟ್ಟುವಾಗಲೇ ರಾಜಕಾರಣದ ರಕ್ತದಲ್ಲೇ ಹುಟ್ಟಿದವರು ಅವರ ಅಪ್ಪನ ಹಿನ್ನೆಲೆ ಇದೆ. ಸಾರ್ವಜನಿಕ ಜೀವನದಲ್ಲಿ ತಾಲೂಕನ್ನ ರಕ್ಷಣೆ ಮಾಡುವ ಕೆಲಸ ಮಾಡಿಕೊಂಡು ಬಂದಿದ್ದೇನೆ..ಅವರು ಒಬ್ಬ ಹಿರಿಯ ಲೀಡರ್ ಮಗ ಅವರು ಹೇಗೆ ಮಾತನಾಡಬೇಕು? ನನ್ನಂಥವನಿಗೆ ಎಂತೆಂಥ ಮಾತು ಆಡುತ್ತಾರೆ. ನನಗೆ ಮಾತನಾಡಿದ್ದು ನೋಡಿ ಇಲ್ಲಿ ಕೆಲವರು ಖುಷಿಪಟ್ಟಿದ್ದರು. ಆದರೆ ನಮ್ಮವರು ಇಲ್ಲಿಯ ನಾಯಕರ ಬಗ್ಗೆ ಮಾತನಾಡಿದ ವಿಡಿಯೋ ಬಿಟ್ಟರು ಆಗ ಅವರಿಗೆ ಗೊತ್ತಾಯ್ತು ಎನಿಸುತ್ತದೆ ಎಂದು ಕಿಮ್ಮನೆ ರತ್ನಾಕರ್ ಗೆ ಟಾಂಗ್ ಕೊಟ್ಟರು.
ಬೆಳೆ ನಷ್ಟದಿಂದ ನಮ್ಮ ರೈತರ ಮಾನಸಿಕತೆ ವ್ಯತ್ಯಾಸ ಆಗಿದೆ.
ತೋಟದ ಬಳಿ ಹೋದರೆ ರೈತರ ಹೆಂಡತಿ ಮಕ್ಕಳು ಅಳುವುದನ್ನು ನೋಡಿ ಹೊಟ್ಟೆ ಉರಿಯುತ್ತದೆ. ನಾನು ಸಿದ್ದರಾಮಯ್ಯನವರ ಬಳಿ ಹೋಗಿ ಹೇಳಿದೆ ಸಾವಿರಾರು ಕೋಟಿ ಜಿಎಸ್‌ಟಿ ಅನುದಾನ ಬರುತ್ತಿದೆ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಹೇಳಿದ್ದೇನೆ. ಹತ್ತು ಕ್ವಿಂಟಾಲ್ ಅಡಿಕೆ ಬೆಳೆಯುವವನು ಇವತ್ತು 50 ಕೆಜಿಗೆ ಬಂದಿದ್ದಾನೆ. ಅಡಿಕೆ ಬೆಳೆಗಾರರು ಯಾರ ಬಳಿಯೂ ಕಷ್ಟ ಹೇಳಿಕೊಳ್ಳುವುದಿಲ್ಲ.
ಈಗ ಅವರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕಿದೆ ಎಂದರು.
ಅಡಿಕೆ ಎಲೆ ಚುಕ್ಕಿ ರೋಗ ಸಂಶೋಧನೆಗಾಗಿ 62 ಕೋಟಿ ಇಟ್ಟಿದ್ದೇನೆ ಎಂದು ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಹಣ ಬಿಡುಗಡೆ ಆಗಿಲ್ಲ. ಕೇಳಿದರೆ ಕೇಂದ್ರದ ಕಡೆ ಬಟ್ಟು ಮಾಡಿ ತೋರಿಸುತ್ತಿದ್ದಾರೆ. ಇಲ್ಲಿಯವರೆಗೂ ಎರಡು ಸರ್ಕಾರಗಳು ಹಣ ನೀಡಿಲ್ಲ. ಅಡಿಕೆ ಬೆಳೆಗಾರರಿಗೆ ಕೊಡುವುದು ಕೇಂದ್ರ ಸರ್ಕಾರದ ಕೆಲಸ ಅಲ್ಲ ರಾಜ್ಯ ಸರ್ಕಾರದ ಕೆಲಸ. ಬಜೆಟ್ ಮಂಡನೆ ಮಾಡುವುದು ಕೇವಲ ಪ್ಯಾಶನ್ ಗಾ? ಒಂದು ದಿನದ ಹೊಗಳಿಕೆಗಾಗಿ ಹೀಗೆ ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದರು.