ಕೊಪ್ಪ ಸರ್ಕಲ್ ನಲ್ಲಿ ಬ್ರೇಕ್ ಫೇಲ್ ಆದ ಬಸ್ - ತಪ್ಪಿದ ಬಾರಿ ಅನಾಹುತ..! tth

ಕೊಪ್ಪ ಸರ್ಕಲ್ ನಲ್ಲಿ ಬ್ರೇಕ್ ಫೇಲ್ ಆದ ಬಸ್ - ತಪ್ಪಿದ ಬಾರಿ ಅನಾಹುತ..!
ತೀರ್ಥಹಳ್ಳಿ : ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಬ್ರೇಕ್ ಫೇಲ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೆಡ್ ಗೆ ಡಿಕ್ಕಿ ಹೊಡೆದು ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಬೈಕ್ ಗಳು ಜಖಂಗೊಂಡಿದೆ.

ಕೊಪ್ಪ ಸರ್ಕಲ್ ಸಮೀಪ ಬರುತ್ತಿದ್ದಂತೆ ಬ್ರೇಕ್ ಫೇಲ್ ಆಗಿರುವುದು ಚಾಲಕನ ಗಮನಕ್ಕೆ ಬಂದಿದ್ದು ಬಸ್ ನಲ್ಲಿ ಇದ್ದವರನ್ನು ಇಳಿಸಿದ್ದಾರೆ. ನಂತರ ಟ್ರಾಫಿಕ್ ಜಾಮ್ ಆದ ಕಾರಣ ಕಲ್ಲನ್ನು ಇಟ್ಟು ಗಾಡಿ ಮುಂದೆ ಬಿಡಲು ಹೋಗಿ ಈ ಅವಘಡ ಸಂಭವಿಸಿದೆ. ಒಂದು ವೇಳೆ ಗಾಡಿ ವೇಗದಲ್ಲಿ ಇದ್ದಾಗ ಏನಾದರು ಗಾಡಿ ಬ್ರೇಕ್ ಫೇಲ್ ಆಗಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. 

ಅದರಲ್ಲೂ ಶಾಲೆ ಬಿಡುವ ಸಮಯ ಆದ ಕಾರಣ ದೊಡ್ಡ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ..



Previous Post Next Post