ಕಾರ್ಮಿಕ ಇಲಾಖೆಯ ಸೌಲಭ್ಯವನ್ನು ಕಾರ್ಮಿಕರು ಸದುಪಯೋಗಪಡೆದುಕೊಳ್ಳಬೇಕು - ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ಕಾರ್ಮಿಕ ಇಲಾಖೆಯಿಂದ ಹಲವಾರು ಸೌಲಭ್ಯ ಸಿಗುತ್ತದೆ. ಅದಕ್ಕೆ ಮೊದಲು ನೀವೆಲ್ಲರೂ ಕಾರ್ಮಿಕ ಕಾರ್ಡ್ ಮಾಡಿಸಿ ಹಾಗೂ ಅದನ್ನು ಪ್ರತಿ ಬಾರಿ ರಿನಿವಲ್ ಮಾಡಿಸಿಕೊಳ್ಳಬೇಕು. ಇದರಿಂದ ಲಕ್ಷಾಂತರ ರೂ ಮೌಲ್ಯದ ಕಿಟ್ ಸಿಗುತ್ತದೆ. ಅದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕಾರ್ಮಿಕ ಕಿಟ್ ವಿತರಿಸಿ ಮಾತನಾಡಿದ ಅವರು ಕಾರ್ಮಿಕ ಇಲಾಖೆಯಲ್ಲಿ ತುಂಬಾ ಸೌಲಭ್ಯ ಸಿಗುತ್ತದೆ. ಮನೆ ಮಾಡುವಾಗ, ಮದುವೆ, ವಿದ್ಯಾಭ್ಯಾಸ ಹಾಗೂ ಕಡೆಯದಾಗಿ ಅಪಘಾತ ಆದರೂ ನಿಮಗೆ ಲಕ್ಷಾಂತರ ಹಣ ಸಿಗುತ್ತದೆ. ನೀವೆಲ್ಲರೂ ಶ್ರಮ ಜೀವಿಗಳು. ಇದರಿಂದ ತುಂಬಾ ಅನುಕೂಲ ಆಗುತ್ತದೆ.
ಕಾರ್ಮಿಕರು ಎಂದರೆ ಅವಘಡ ಸಹ ನಮ್ಮ ಬೆನ್ನ ಹಿಂದೆ ಇರುತ್ತದೆ ಹಾಗಾಗಿ ಇದರ ಸದುಪಯೋಗ ನೀವೆಲ್ಲರೂ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಶೈಲ, ಕಾರ್ಮಿಕ ಇಲಾಖೆಯ ಅಧಿಕಾರಿ ಸುಖಿತ, ಮಂಜುನಾಥ್ ಸೇರಿ ಹಲವರು ಉಪಸ್ಥಿತರಿದ್ದರು.
Tags:
ಆರಗ ಜ್ಞಾನೇಂದ್ರ