ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಬಂಡೆ ವೆಂಕಟೇಶ್ ರಾಜೀನಾಮೆ..! tth

ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಬಂಡೆ ವೆಂಕಟೇಶ್ ರಾಜೀನಾಮೆ..!

ತೀರ್ಥಹಳ್ಳಿ : ತಾಲೂಕಿನ ಅತೀ ದೊಡ್ಡ ಗ್ರಾಮಪಂಚಾಯಿತಿಗಳಲ್ಲಿ ಒಂದಾದ ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿದ್ದ ಬಂಡೆ ವೆಂಕಟೇಶ್ ಅವರು ರಾಜೀನಾಮೆ ನೀಡಿದ್ದಾರೆ. ಬಂಡೆ ವೆಂಕಟೇಶ್ ಅವರ ರಾಜೀನಾಮೆ ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ಗ್ರಾಮಪಂಚಾಯಿತಿಯ ಅಭಿವೃದ್ಧಿಗಾಗಿ ವೆಂಕಟೇಶ್ ಅವರು ಬಹಳ ಶ್ರಮಿಸಿದ್ದರು.

ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ, ಕಾಂಗ್ರೆಸ್ ನಾಯಕರ ತೀರ್ಮಾನದಂತೆ ಬದ್ಧರಾಗಿ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗ್ರಾಮಪಂಚಾಯಿತಿಗೆ ಅಧ್ಯಕ್ಷರಾಗುತ್ತಿದ್ದಂತೆ ತಮ್ಮ ವಿಶೇಷ ಆಲೋಚನೆಗಳಿಂದ 
ಗ್ರಾಮಪಂಚಾಯಿತಿಯನ್ನು ಹೈಟೆಕ್ ಮಾಡುವ ಆಲೋಚನೆ ಇಟ್ಟುಕೊಂಡು ತಮ್ಮ ಆಲೋಚನೆಯತೆ ಗ್ರಾಮಪಂಚಾಯಿತಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಗ್ರಾಮಪಂಚಾಯಿತಿ ಎದುರು ಇಂಟರ್ ಲಾಕ್ ಅಳವಡಿಕೆ, ದ್ವಜಸ್ತಂಬ,ಅಲಂಕೃತ ಹೂವಿನ ಗಿಡಗಳು, ವಿವಿಧ ಪಿಟೋಪಕರಣ, ಮೀಟಿಂಗ್ ಹಾಲ್ ನಲ್ಲಿ ಕವಿಗಳಿಂದ ಹಿಡಿದು ನಾರಾಯಣ ಗುರುಗಳು, ಕೆಂಪೇಗೌಡರು ಸೇರಿ ಹಲವರ ಫೋಟೋ ಹಾಕುವ ಮೂಲಕ ರಾಜ್ಯದಲ್ಲೇ ಮಾದರಿ ಮಾಡಿದ್ದರು.

ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು
ಅಭಿವೃದ್ಧಿಯ ಸಮಸ್ಯೆಯನ್ನು ಹೇಳಿದಾಗ ಯಾವುದನ್ನು ಅಲ್ಲಗೆಳೆಯುತ್ತಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆ ಚಾಚು ತಪ್ಪದೆ ಈಡೇರಿಸಿದ್ದರು. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣೆಗೂ ಮೊದಲೇ ತಾಲೂಕು ಪಂಚಾಯತ್ ಅನುದಾನದಿಂದ ಅಭಿವೃದ್ಧಿ ಕೆಲಸ ಮಾಡಿಸಿ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಇದ್ದು ತನ್ನ ಭಾಗದಲ್ಲಿ ಯಾವುದೇ ಕೆಲಸ ಇದ್ದರೂ ಪಕ್ಷ ಭೇದ ಮರೆತು ಅಭಿವೃದ್ಧಿ ಕಾರ್ಯದಲ್ಲಿ ತೊಡಗುತ್ತಿದ್ದರು. 

ಕರ್ನಾಟಕಕ್ಕೆ ಕನಕಪುರದ ಬಂಡೆ ಹೇಗೋ ತೀರ್ಥಹಳ್ಳಿಗೆ ಮೇಲಿನಕುರುವಳ್ಳಿ ಬಂಡೆ ಹಾಗೆ ಎನ್ನುವ ಮಾತಿತ್ತು. ಅದರಂತೆ ಗ್ರಾಮಪಂಚಾಯಿತಿ ಅಭಿವೃದ್ಧಿ ಮಾಡಿ ಜನಮೆಚ್ಚುಗೆ ಪಡೆದಿದ್ದರು.  ಒಟ್ಟಿನಲ್ಲಿ ಅಭಿವೃದ್ಧಿ ಹರಿಕಾರ ವೆಂಕಟೇಶ್ ರಾಜೀನಾಮೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಿಡಾಗಿದೆ..



Previous Post Next Post