ತೀರ್ಥಹಳ್ಳಿ ಪಟ್ಟಣದಲ್ಲಿ ಶೀಘ್ರದಲ್ಲಿ ಸಿಸಿಟಿವಿ ಅಳವಡಿಕೆ - ವಾಹನ ನಿಲುಗಡೆಗೆ ಪೇ ಪಾರ್ಕಿಂಗ್ ಆರಂಭವಾಗುತ್ತಾ..!? Tth

ತೀರ್ಥಹಳ್ಳಿ ಪಟ್ಟಣದಲ್ಲಿ ಶೀಘ್ರದಲ್ಲಿ ಸಿಸಿಟಿವಿ ಅಳವಡಿಕೆ -  

ವಾಹನ ನಿಲುಗಡೆಗೆ ಪೇ ಪಾರ್ಕಿಂಗ್ ಆರಂಭವಾಗುತ್ತಾ..!?


ತೀರ್ಥಹಳ್ಳಿ : ಪಟ್ಟಣದಲ್ಲಿ ವಿಪರೀತ ಟ್ರಾಫಿಕ್ ಉಂಟಾಗುತ್ತಿದ್ದು ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯತ್ ನ ಬಿ ರವೀಂದ್ರ ಶೆಟ್ಟಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯ ಜೊತೆಗೆ ಸಭೆ ನಡೆಸಲಾಯಿತು.

ಟ್ರಾಫಿಕ್ ನಿಯಂತ್ರಣಕ್ಕಾಗಿ ಪಟ್ಟಣದ ವಿವಿಧಡೆ ಪಟ್ಟಣ ಪಂಚಾಯತ್ ಅನುದಾನ ಹಾಗೂ ದಾನಿಗಳ ನೆರವಿನಿಂದ ಸಿಸಿಟಿವಿ ಹಾಕುವ ಸಲುವಾಗಿ ಚರ್ಚೆ ನಡೆಸಲಾಯಿತು. ಇನ್ನು ಪಟ್ಟಣದಲ್ಲಿ ಶಾಲಾ ವಾಹನ ಹಾಗೂ ಕಲ್ಯಾಣ ಮಂದಿರ ಬಳಿ  ವಾಹನಗಳ ದಟ್ಟಣೆ ಹೆಚ್ಚಾಗಿ ಇದರಿಂದ ಬೇರೆಯವರಿಗೂ ತೊಂದರೆ ಆಗುತ್ತಿದೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಿ ಶಿವಮೊಗ್ಗಕ್ಕೆ ಹೋಗುವುದರಿಂದ  ಪ್ರತಿಯೊಬ್ಬರಿಗೂ ತೊಂದರೆ ಆಗುತ್ತದೆ. ಈ ಕಾರಣಕ್ಕೆ ಪೇ ಪಾರ್ಕಿಂಗ್ ಮಾಡಬೇಕು ಎಂಬುದಾಗಿ ಚರ್ಚೆ ನಡೆಸಲಾಯಿತು..

ಇನ್ನು ವಾಹನ ನಿಲುಗಡೆ ವಿಚಾರದಲ್ಲಿ ಸಹ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು ನಿಲ್ಲುವ ದಿನಗಳಲ್ಲಿ ಬದಲಾವಣೆ ಮಾಡುತ್ತಿರಬೇಕು. ಇನ್ನು ಪಟ್ಟಣದ ಒಳಭಾಗದಲ್ಲಿ ಏಕ ಸಂಚಾರ ವ್ಯವಸ್ಥೆ ಆಗಲೇಬೇಕು. ರಥಬೀದಿ ಹಾಗೂ ಛತ್ರಕೇರಿಯಲ್ಲಿ ಹಾಗೆ ಮಸೀದಿ ರಸ್ತೆ- ಮಾರಿಕಾಂಬಾ ದೇವಸ್ಥಾನ ಎದುರು ಏಕ ಸಂಚಾರ ನಿಯಮ ಜಾರಿಯಾಗಬೇಕಿದೆ. ಹಾಗೆಯೇ ಪಟ್ಟಣದಲ್ಲಿ ಬ್ಯಾನರ್, ಬಂಟಿಂಗ್ ಗಳಿಗೆ ದಿನ ನಿಗದಿ ಮಾಡಿ, ತೆರೆಯುವ ಕೆಲಸ ನಾವು ಮಾಡುತ್ತೇವೆ ಎಂದು ಪೊಲೀಸರು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಆಸಾದಿ, ಡಿ ವೈ ಎಸ್ ಪಿ ಅರವಿಂದ ಕರಗುಜ್ಜಿ, ಇನ್ಸ್ಪೆಕ್ಟರ್ ಇಮ್ರಾನ್ ಬೇಗ್, ಪ. ಪಂ ಉಪಾಧ್ಯಕ್ಷರಾದ ಗೀತಾ ರಮೇಶ್, ಮುಖ್ಯಾಧಿಕಾರಿ ನಾಗರಾಜ್, ಹಾಗೂ ಸದಸ್ಯರು ಇದ್ದರು.



Previous Post Next Post