ಕೆಸರು ಗದ್ದೆಯಂತ ರಸ್ತೆಯಿಂದ ಮುಕ್ತಿ ನೀಡಿ ಎಂದು ನಾಟಿ ಮಾಡಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು Students Problem

ಕೆಸರು ಗದ್ದೆಯಂತ ರಸ್ತೆಯಿಂದ ಮುಕ್ತಿ ನೀಡಿ ಎಂದು ನಾಟಿ ಮಾಡಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು 


ಶಿವಮೊಗ್ಗ: ಮಳೆಗಾಲ ಬಂದರೆ ಸಾಕು ತಾಲೂಕಿನ ಕೋಣೆಹೊಸೂರು ಗ್ರಾಮದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹಿಂಜರಿಯುವ ಪರಿಸ್ಥಿತಿ ಇದೆ. ಕಾರಣ ಈ ಗ್ರಾಮದ ರಸ್ತೆಯ ಅವ್ಯವಸ್ಥೆ.

ಕೋಣೆ ಹೊಸೂರು ಗ್ರಾಮದ ವಿದ್ಯಾರ್ಥಿಗಳು ಹಾಗೂ ಜನರು ಮುಖ್ಯ ರಸ್ತೆಗೆ ಬಂದು ಅಲ್ಲಿಂದ ತುಪ್ಪೂರು ಗ್ರಾಮದ ಶಾಲೆಗೆ, ಅಂಗಡಿಗೆ ಕೆಸರು ಮಯವಾದ ರಸ್ತೆಯಲ್ಲೇ ಸಾಗಬೇಕು. ಮಳೆಗಾಲದಲ್ಲಿ ಗ್ರಾಮದ ರಸ್ತೆಯು ಕಳೆದ 10 ವರ್ಷಗಳಿಂದಲೂ ಕೆಸರಿನಿಂದ ತುಂಬಿಕೊಳ್ಳುತ್ತಿದೆೆ. ಈ ರಸ್ತೆಯಲ್ಲಿ ಹುಷಾರಾಗಿ ನಡೆದುಕೊಂಡು, ಇಲ್ಲವೇ ಟ್ರಾಕ್ಟರ್​, ಕಾರಿನಂತಹ ದೊಡ್ಡ ವಾಹನದಲ್ಲಿ ಓಡಾಡಬೇಕು. ಜನರು ಬೈಕ್​ನಲ್ಲಿ ಹೋಗಲು ಮುಂದಾದರೆ ಕೆಸರಿನಲ್ಲಿ ಚಕ್ರ ಸಿಲುಕಿ ಬಿದ್ದು ಹೋಗುತ್ತಾರೆ. ಶಾಲಾ ವಿದ್ಯಾರ್ಥಿಗಳು ಬೇಗ ಹೋಗಲು ಯತ್ನಿಸಿ, ಜಾರಿ ಬಿದ್ದು ಬಟ್ಟೆಯೆಲ್ಲಾ ಕೆಸರು ಮಾಡಿಕೊಳ್ಳುತ್ತಿದ್ದಾರೆ.

ಈ ಗ್ರಾಮದಲ್ಲಿ ಸುಮಾರು 100 ಮನೆಗಳಿವೆ. ಈ ಗ್ರಾಮಕ್ಕೆ ರಸ್ತೆಬೇಕೆಂದು ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಓಟು ಪಡೆದು ಹೋಗುವ ಜನಪ್ರತಿನಿಧಿಗಳು ಇತ್ತ ತಿರುಗಿಯು ನೋಡಲ್ಲ. ಅಧಿಕಾರಿಗಳಿಗೆ ಮನವಿ ಮಾಡಿ ಸುಸ್ತಾಗಿದೆ. ಕೋಣೆಹೂಸೂರು ಗ್ರಾಮವು ತುಪ್ಪೂರು ಗ್ರಾಮ ಪಂಚಾಯಿತಿಗೆ ಸೇರುತ್ತದೆ‌. ಈ ಗ್ರಾಮದಿಂದ ಇಬ್ಬರು ಜನಪ್ರತಿನಿಧಿಗಳು ಇದ್ದರು ಸಹ ಸುಮಾರು ಎರಡು ಕಿಮೀ ರಸ್ತೆ ಆಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು. ಇದರಿಂದ ಇಂದು ಗ್ರಾಮಸ್ಥರು ಶಾಲಾ ಮಕ್ಕಳ ಜೊತೆ ಸೇರಿ ರಸ್ತೆಯು ಕೆಸರು ಗದ್ದೆಯಾಗಿದೆ ಎಂದು ಅಣಕದ ರೀತಿ ರಸ್ತೆಯಲ್ಲಿಯೇ ನಾಟಿ ಮಾಡಿದ್ದಾರೆ.




Previous Post Next Post