ತೀರ್ಥಹಳ್ಳಿ ವೈದ್ಯರ ವರ್ಗಾವಣೆ ತಡೆ ಹಿಡಿಯುವಂತೆ ಕಿಮ್ಮನೆ ಮನವಿ Kimmane ರತ್ನಾಕರ್

ತೀರ್ಥಹಳ್ಳಿ ವೈದ್ಯರ ವರ್ಗಾವಣೆ ತಡೆ ಹಿಡಿಯುವಂತೆ ಕಿಮ್ಮನೆ ಮನವಿ 


ತೀರ್ಥಹಳ್ಳಿ : ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯ ಪ್ರಮುಖ ಆರು ವೈದ್ಯರನ್ನು ವರ್ಗಾವಣೆಗೊಳಿಸಿ ಎಂದು ಸರ್ಕಾರ ಆದೇಶ ಮಾಡಿತ್ತು. ಸರ್ಕಾರದ ಆದೇಶದ ವರದಿಯನ್ನ ಶಿವಮೊಗ್ಗ ಸುದ್ದಿ ವರದಿ ಸಹ ಮಾಡಿತ್ತು.
ಶಿವಮೊಗ್ಗ ಸುದ್ದಿ ವರದಿಯ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಳಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ದೂರವಾಣಿ ಮೂಲಕ ಮಾತನಾಡಿದ್ದು ವೈದ್ಯರ ವರ್ಗಾವಣೆಯನ್ನು ತಡೆ ಹಿಡಿಯುವಂತೆ ಮನವಿ ಮಾಡಿದ್ದಾರೆ.


ಆಸ್ಪತ್ರೆಯಲ್ಲಿ ಇದ್ದಂತಹ ಆರು ವೈದ್ಯರನ್ನು ವರ್ಗಾವಣೆ ಮಾಡಲು ಆದೇಶ ಮಾಡಲಾಗಿದೆ. ಆದರೆ ಇಲ್ಲಿ ಬೇರೆ ವೈದ್ಯರ ನೇಮಕ ಆಗಿಲ್ಲ. ಅನಸ್ತೇಶಿಯ ವೈದ್ಯರು ಒಬ್ಬರೇ ಇದ್ದಾರೆ. ತಿಂಗಳಿಗೆ ಸುಮಾರು 40 ಹೆರಿಗೆಗಳು ಆಗುತ್ತವೆ.
ಈ ಎಲ್ಲಾ ಕಾರಣದಿಂದ ತಾತ್ಕಾಲಿಕವಾಗಿ ವರ್ಗಾವಣೆ ಆದೇಶವನ್ನು ತಡೆ ಹಿಡಿಯುವಂತೆ ಮನವಿ ಮಾಡಿದ್ದಾರೆ.

ಈಗಾಗಲೇ ಆರಗ ಜ್ಞಾನೇಂದ್ರ ಸಹ ವರ್ಗಾವಣೆ ಮಾಡಬಾರದು ಎಂದು ಪತ್ರ ಬರೆದಿದ್ದರು  ಈಗ ಕಿಮ್ಮನೆ ರತ್ನಾಕರ್ ಸಹ ತಡೆ ಹಿಡಿಯಬೇಕೆಂದು ತಿಳಿಸಿದ್ದು ವೈದ್ಯರು ವರ್ಗಾವಣೆ ಆಗುತ್ತಾರಾ? ಅವರು ಅಥವಾ ವರ್ಗಾವಣೆಗೆ ತಡೆ ಸಿಗುತ್ತಾ? ಕಾದು ನೋಡಬೇಕಿದೆ..



Previous Post Next Post