ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅವ್ಯವಸ್ಥೆ - ಬಿರುಕು ಬಿಟ್ಟ ರಸ್ತೆ
ಕಳಪೆ ಕಾಮಗಾರಿ ವಿರುದ್ಧ ಶಾಸಕರು ಮೌನ..!?
ತೀರ್ಥಹಳ್ಳಿ :ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯ ಹೊಂಡ ತೆಗೆದು ಕಳಪೆ ಕಾಮಗಾರಿಯಿಂದ ತೀರ್ಥಹಳ್ಳಿ - ಹಣಗೆರೆ - ಶಿವಮೊಗ್ಗಕ್ಕೆ ಹಾದು ಹೋಗುವ ಮುಖ್ಯ ರಸ್ತೆ ಅರ್ಧ ಕರ್ದ ಬಿರುಕು ಬಿಟ್ಟಿರುವ ಘಟನೆ ಹಣಗೆರೆ ಗ್ರಾಂ ಪಂ ವ್ಯಾಪ್ತಿಯ ಬಸವನಗದ್ದೆ ಸಮೀಪದ ಶಿರನಲ್ಲಿ ಸಮೀಪ ನಡೆದಿದೆ
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ವೇಳೆ ರಸ್ತೆ ಬದಿಯಲ್ಲಿ ದೊಡ್ಡದಾದ ಟ್ರಂಚ್ ಗಳನ್ನು ಹೊಡೆದಿದ್ದು ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದಿ ಬಿದ್ದಿದೆ.
ವಾಹನ ಸವಾರರು ವಾಹನ ಚಲಾಯಿಸಲು ಭಯಭೀತರಾಗಿದ್ದಾರೆ. ಹಣಗೆರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಹಿತಿ ತಿಳಿದು ಸದ್ಯಕ್ಕೆ ಬ್ಯಾರಿಕೆಡ್ ಅಳವಡಿಕೆ ಮಾಡಿಸಿದ್ದಾರೆ.
ಈಗಾಗಲೇ ಹಲವೆಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ಅದರ ಕಾಮಗಾರಿ ಸಂಪೂರ್ಣ ಕಳಪೆ ಯಿಂದ ಕೂಡಿದ್ದು ಈ ಬಗ್ಗೆ ಶಾಸಕ ಆರಗ ಜ್ಞಾನೇಂದ್ರರವರು ಮೌನ ವಹಿಸಿರುವುದು ಬಹಳ ಕುತೂಹಲ ಮೂಡಿಸಿದೆ.
ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸುವ ಶಾಸಕರು ಈ ವಿಚಾರದಲ್ಲಿ ಮೌನ ಏಕೆ? ಕೇಂದ್ರದ ಯೋಜನೆ ಎಂಬ ಕಾರಣದಿಂದಲೇ? ಎಂದು ಸ್ಥಳೀಯರು ಅಕ್ರೋಶ ಹೊರ ಹಾಕಿದ್ದಾರೆ.