ಸರ್ಕಾರಿ ವಿದ್ಯಾರ್ಥಿಗಳ ನಿಲಯದಲ್ಲಿ ಮೂಲಭೂತ ಸೌಕರ್ಯದ ಕೊರತೆ ಆಗ್ತಿದ್ಯಾ..!? Hostel

ಸರ್ಕಾರಿ ವಿದ್ಯಾರ್ಥಿಗಳ ನಿಲಯದಲ್ಲಿ ಮೂಲಭೂತ ಸೌಕರ್ಯದ ಕೊರತೆ ಆಗ್ತಿದ್ಯಾ..!?

ಸರ್ಕಾರದಿಂದ ಸೌಲಭ್ಯ ದೊರಕಿದರು ಅಧಿಕಾರಿಗಳು ನೀಡುತ್ತಿಲ್ವಾ..!?

ಮಕ್ಕಳಿಗೆ ಊಟಕ್ಕೆ ಅನ್ನ- ಅಧಿಕಾರಿಗಳಿಗೆ ಮಾತ್ರ ಮುದ್ದೆ.. ಏನಿದು ರಹಸ್ಯ..!?

ತೀರ್ಥಹಳ್ಳಿ : ಪಟ್ಟಣದ ಸೊಪ್ಪುಗುಡ್ಡೆಯಲ್ಲಿರುವ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಮೂಲಭೂತ ಸೌಕರ್ಯದಲ್ಲಿ ಸಂಪೂರ್ಣ ಕೊರತೆ ಕಾಣಿಸುತ್ತಿದೆ ಎಂದು ಅಲ್ಲಿನ ವಿದ್ಯಾರ್ಥಿಗಳ ಪೋಷಕರು ಆರೋಪಿಸುತ್ತಿದ್ದಾರೆ.

ಏನೆಲ್ಲಾ ಸಮಸ್ಯೆ ಹಾಸ್ಟೆಲ್ ನಲ್ಲಿದೆ..!?

ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸ್ನಾನ ಮಾಡಲು ಬಿಸಿ ನೀರಿನ ಸೌಲಭ್ಯ ಇಲ್ಲವಾಗಿದೆ.  ಒಂದು ಹಾಸ್ಟೆಲ್ ನಲ್ಲಿ  ಬಿಸಿ ನೀರು ಇಲ್ಲದೆ ಮಕ್ಕಳಿಗೆ ತಣ್ಣೀರು ಸ್ನಾನ ಮಾಡುವ ಪರಿಸ್ಥಿತಿ ಎದುರಾಗಿದೆ. ಇನ್ನು ಮತ್ತೊಂದು ಹಾಸ್ಟೆಲ್ ನಲ್ಲಿ ಗ್ಯಾಸ್ ಗಿಸರ್ ಇದ್ದರು ಸಹ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವುದರಿಂದ ಸಮಸ್ಯೆ ಆಗುತ್ತಿದೆ ಎಂದು ಪೋಷಕರು ತಿಳಿಸಿದ್ದಾರೆ.

ಮಕ್ಕಳಿಗೆ ಹಾಸಿಗೆ ಸೌಲಭ್ಯ ಇಲ್ಲ..!

ಡಾ. ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕಬ್ಬಿಣದ ಮಂಚ ಇದ್ದು ಅದಕ್ಕೆ ಹಾಸಿಗೆ ವ್ಯವಸ್ಥೆ ಇಲ್ಲದಂತೆ ಆಗಿದೆ. ಮಕ್ಕಳು ಬೆಡ್ಶಿಟ್ ಹಾಗೂ ಜಮಖಾನ ಹಾಕಿ ಮಲಗುವ ಪರಿಸ್ಥಿತಿ ಅಲ್ಲಿದೆ.
ಎಸ್ ಸಿ ಎಸ್ ಟಿ ಗೆ ಒಳಪಟ್ಟಿರುವ ಈ ವಿದ್ಯಾರ್ಥಿ ನಿಲಯದಲ್ಲಿ ಸರ್ಕಾರ ನಿಜವಾಗಿಯೂ ಹಾಸಿಗೆ ನೀಡಿಲ್ಲವಾ? ಅಥವಾ ಅಧಿಕಾರಿಗಳು ಇದರಲ್ಲಿ ಏನಾದರು ಆಟ ಆಡುತ್ತಿದ್ದಾರಾ? ಮಕ್ಕಳಿಗೆ ಸರ್ಕಾರ ಸೌಲಭ್ಯ ನೀಡಿದರು ಕೆಲವು ಸಿಗದ ಪರಿಸ್ಥಿತಿ ಆದಂತೆ ಕಾಣಿಸುತ್ತಿದೆ ಎಂಬುದಾಗಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳಿಗೆ ಅನ್ನ - ಅಧಿಕಾರಿಗಳಿಗೆ ಮುದ್ದೆ..!

ಡಾ. ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಷ್ಟೇ ಅಲ್ಲದೆ ಪ್ರತಿಯೊಂದು ಸರ್ಕಾರಿ ಹಾಸ್ಟೆಲ್ ಗಳಲ್ಲಿ ಪ್ರತಿ ದಿನ ಅಡುಗೆ ವಿಚಾರವಾಗಿ ಒಂದು ತಿಂಡಿ - ಊಟ ಏನೆಲ್ಲಾ ಮಾಡಬೇಕು ಎಂಬುದು ನಿಗದಿ ಆಗಿರುತ್ತದೆ. ಹಾಗೆ ಪ್ರತಿದಿನ ಮಧ್ಯಾಹ್ನ ಮುದ್ದೆ, ಅನ್ನ ಸಾರು ಅಥವಾ ಸಾಂಬಾರ್ ಕೊಡಬೇಕು ಎಂಬುದು ಸರ್ಕಾರಿ ನಿಯಮ. ಆದರೆ ಡಾ. ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ  ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟಕ್ಕೆ ಮುದ್ದೆ ನೀಡದೆ ಅಧಿಕಾರಿಗಳಿಗೆ ಮಾತ್ರ ಫೋಟೋ ಕಳುಹಿಸುತ್ತಿದ್ದಾರೆ ಎಂಬ ಆರೋಪ ವಿದ್ಯಾರ್ಥಿಗಳ ಪೋಷಕರಿಂದ ಕೇಳಿ ಬಂದಿದೆ..

ಒಟ್ಟಿನಲ್ಲಿ ಕೈಗೆ ಸಿಕ್ಕಿದ್ದು ಬಾಯಿಗೆ ಬಂದಿಲ್ಲ ಎಂಬ ಗಾದೆ ಮಾತಿನಂತೆ ಸರ್ಕಾರ ಕೊಟ್ಟರು ಅಧಿಕಾರಿಗಳು ಕೊಡಲ್ಲ ಎಂಬಂತೆ ಆಗಿದೆ..



Previous Post Next Post