ಸಾಮಾಜಿಕ ಜಾಲತಾಣದಲ್ಲಿ ಮಳೆ ರಜೆ ಕುರಿತು ನಕಲಿ ಸರ್ಕಾರಿ ಆದೇಶ: ಹೊಸನಗರ ತಾಲೂಕು ಆಡಳಿತದಿಂದ ಪೊಲೀಸರಿಗೆ ದೂರು
ಹೊಸನಗರ: ದಿನಾಂಕ 12.07.2025 ರಂದು ಹೊಸನಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿರುವ ಬಗ್ಗೆ ನಕಲಿ ಆದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆಗೆ ಈಗಾಗಲೇ ದೂರು ನೀಡಲಾಗಿದ್ದು, ಸುಳ್ಳು ವದಂತಿಗಳನ್ನು ಹರಡಬಾರದಾಗಿ ತಾಲೂಕು ಆಡಳಿತದಿಂದ ಕೋರಿದೆ.
ಈ ನಕಲಿ ಆದೇಶ ಹೊಸನಗರ ತಾಲೂಕಿನ ಬಹುತೇಕ ಕಡೆ ಹರಿದಾಡಿದೆ. ಆದರೆ ಬಾರೀ ಪ್ರಮಾಣದ ಮಳೆ ಇರದ ಕಾರಣ ಪೋಷಕರು ಈ ರಜೆಯ ಆದೇಶ ನೋಡಿ ಗೊಂದಲಕ್ಕೆ ಬಿದ್ದಿದ್ದರು. ನಂತರ ತಾಲೂಕು ಆಡಳಿತ ಪರಿಶೀಲಿಸಿ ಇದು ನಕಲಿ ಎಂದು ಸ್ಪಷ್ಟನೆ ನೀಡಿದ್ದಲ್ಲದೆ ಈಬಗ್ಗೆ ಸೂಕ್ತ ಕ್ರಮಕ್ಕಾಗಿ ಪೊಲೀಸರಿಗೆ ದೂರು ನೀಡಿದೆ.
Tags:
ಹೊಸನಗರ ಸುದ್ದಿ
