ಶಿವಮೊಗ್ಗದಲ್ಲಿ ಸ್ನೇಹಿತರ ಮಧ್ಯೆ ಕಿರಿಕ್ - ಓರ್ವನ ಹ**ತ್ಯೆ ..!
ಶಿವಮೊಗ್ಗ: ಗುರುವಾರ ರಾತ್ರಿ ಪಾರ್ಟಿ ವೇಳೆ ಗಲಾಟೆಯಲ್ಲಿ ಯುವಕನ ಹ*ತ್ಯೆ ನಡೆದಿರುವ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆಯ ಇ-ಬ್ಲಾಕ್‌ನಲ್ಲಿ ಸಂಭವಿಸಿದೆ.
ಬೊಮ್ಮನಕಟ್ಟೆ ನಿವಾಸಿ ಪವನ್ (28) ಹ*ತ್ಯೆಯಾದ ಯುವಕ. ಕಳೆದ ರಾತ್ರಿ ಸ್ನೇಹಿತನ ಮನೆಯಲ್ಲಿ ಪಾರ್ಟಿಗೆ ತೆರೆಳಿದ್ದ ವೇಳೆ ಮದ್ಯಪಾನ ಸೇವಿಸಿದ ನಂತರ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ ಎಂದು ಆರೋಪಿಸಲಾಗಿದೆ.
ಸ್ನೇಹಿತರ ಮಧ್ಯೆ ನಡೆದ ಗಲಾಟೆಯಲ್ಲಿ ಪವನ್ ಹ*ತ್ಯೆಯಾಗಿದೆ. ಪ್ರಕರಣ ಸಂಬಂಧ ಓರ್ವನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Tags:
ಕ್ರೈಂ ಸುದ್ದಿ