ಟೆಂಡರ್ ಇಲ್ಲದೆ ಓಡುತ್ತಿದೆಯೇ ಸರ್ಕಾರಿ ಕಾರು..!? Car

ಟೆಂಡರ್ ಇಲ್ಲದೆ ಓಡುತ್ತಿದೆಯೇ ಸರ್ಕಾರಿ ಕಾರು..!?

ತೀರ್ಥಹಳ್ಳಿಯ ಸರ್ಕಾರಿ ಅಧಿಕಾರಿಯೊಬ್ಬರ ಕಾರು ಅನಧಿಕೃತವೇ..!?



ತೀರ್ಥಹಳ್ಳಿ : ಸರ್ಕಾರಿ ಅಧಿಕಾರಿಯೊಬ್ಬರ ಕಾರು ನಾಲ್ಕೈದು ತಿಂಗಳಿಂದ ಓಡಾಟ ಮಾಡುತ್ತಿದ್ದು ಅದರಲ್ಲಿ ಸ್ವತಃ ಅಧಿಕಾರಿಯೇ ಚಾಲನೆ ಮಾಡುತ್ತಿರುವುದು ಗಮನಿಸಿದ ಸಾರ್ವಜನಿಕರು ಇದು ಅಧಿಕೃತ ವಾಹನವೋ? ಅಥವಾ ಅನಧಿಕೃತ ವಾಹನವೋ? ಎಂಬ ಪ್ರೆಶ್ನೆಯನ್ನು ಮಾಡುತ್ತಿದ್ದಾರೆ..

ಕಳೆದ ನಾಲ್ಕೈದು ತಿಂಗಳ ಹಿಂದೆ ಅಧಿಕಾರಿಗೆ ತಾಲೂಕು ಪಂಚಾಯತ್ ಕಡೆಯಿಂದ ಕಾರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಕಾರಿಗೆ ಟೆಂಡರ್ ಆಗಿಲ್ಲ ಎಂಬುದಾಗಿ ಹೇಳುತ್ತಿದ್ದು ಅದಕ್ಕೆ ಪುಷ್ಟಿ ನೀಡುವಂತೆ ಕಾರಿಗೆ ಚಾಲಕ ಇಲ್ಲ ಹಾಗೆ ಕಾರಿಗೆ ಕರ್ನಾಟಕ ಸರ್ಕಾರ ಎಂಬ ಬೋರ್ಡ್ ಇಲ್ಲ. ಹಾಗಾದರೆ ಸರ್ಕಾರ ನೀಡಿರುವ ವಾಹನದಲ್ಲಿ ಹೀಗೆ ಓಡಾಟ ಮಾಡಬಹುದೇ? ಎಂಬ ಪ್ರೆಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ..

ಮೂರು ತಿಂಗಳ ಒಳಗೆ ಓಡಾಡಲು ತಾಲೂಕು ಪಂಚಾಯತ್ ಅನುಮತಿ ನೀಡಬಹುದು.  ಆದರೆ ಈಗ ಅದಕ್ಕಿಂತ ಜಾಸ್ತಿ ಆಗಿದ್ದು ಇಲ್ಲಿಯವರೆಗೆ ಯಾವ ಕಾರಣಕ್ಕೆ ಟೆಂಡರ್ ಆಗಿಲ್ಲ? ಯಾವ ಆಧಾರದಲ್ಲಿ ಸರ್ಕಾರಿ ವಾಹನ ಉಪಯೋಗ ಮಾಡುತ್ತಿದ್ದಾರೆ? ಸರ್ಕಾರ ಬಳಿ ಯಾವ ಆಧಾರದಲ್ಲಿ ಹಣ ಪಡೆದುಕೊಳ್ಳುತ್ತಿದ್ದಾರೆ.? ಓರ್ವ ಸರ್ಕಾರಿ ಅಧಿಕಾರಿಯೇ ವಾಹನ ಚಲಾವಣೆ ಮಾಡಬಹುದೇ? ಹಾಗೂ ಒಂದು ವೇಳೆ ಚಾಲಕ ಇದ್ದಾನೆ ಎಂದು ಹೇಳಿದರು ಆತ ಯಾರು? ಆತನಿಗೆ ಸಂಬಳ ಹೋಗುತ್ತಿದೆಯೇ? ಎಂಬೆಲ್ಲಾ ಪ್ರೆಶ್ನೆಗಳನ್ನು ಸಾರ್ವಜನಿಕರಿಂದ ಮಾತು ಕೇಳಿ ಬರುತ್ತಿದೆ...

ಯಾವುದೇ ಖಾಸಗಿ ವಾಹನವಾದರೆ ಅಥವಾ ಅವರದ್ದೇ ಸ್ವಂತ ವಾಹನವಾಗಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ ಆದರೆ ಸರ್ಕಾರ ನೀಡಿರುವ ವಾಹನ ಟೆಂಡರ್ ಆಗದೇ ಓಡಿಸುವುದು ಅನಧಿಕೃತ ಅಲ್ಲವೇ? ಈ ಬಗ್ಗೆ ತಾಲೂಕು ಪಂಚಾಯತ್ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಏನು ಹೇಳುತ್ತಾರೆ ನೋಡಬೇಕಿದೆ...



Previous Post Next Post