ತೀರ್ಥಹಳ್ಳಿಯಲ್ಲಿ ಕೆರೆಗೆ ನುಗ್ಗಿದ ಕಾರು - ಚಾಲಕ ಪಾರು..! Tth

ತೀರ್ಥಹಳ್ಳಿಯಲ್ಲಿ ಕೆರೆಗೆ ನುಗ್ಗಿದ ಕಾರು - ಚಾಲಕ ಪಾರು..!
ತೀರ್ಥಹಳ್ಳಿ : ಶಿವಮೊಗ್ಗಕ್ಕೆ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬಾಳಗಾರು ಸಮೀಪದ ಕೆರೆಯೊಂದಕ್ಕೆ ಹಾರಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ರಾತ್ರಿ ಬಾಳಗಾರು ತಿರುವಿನಲ್ಲಿ ಎದುರಿನಿಂದ ಬಂದ ಸರ್ಕಾರಿ ಬಸ್ ನಿಂದ ಅಪಘಾತಕ್ಕೊಳಗಾಗುವುದರಿಂದ ತಪ್ಪಿಸಲು ಪ್ರಯತ್ನಿಸಿದ ಕಾರು ಚಾಲಕ ತಿರುವಿನಲ್ಲಿದ್ದ ಬಾಳಗಾರು ಕೆರೆಗೆ ಹಾರಿಸಿದ್ದು ಈ ಅವಘಡ ಸಂಭವಿಸಿದೆ.

ಕೆರೆಯಲ್ಲಿ ಮುಳುಗಿದ್ದ ಕಾರಿನೊಂದಿಗಿದ್ದ ಚಾಲಕನನ್ನು ರಕ್ಷಿಸಲು ಸರ್ಕಾರಿ ಬಸ್ ನಲ್ಲಿದ್ದ ಪ್ರಯಾಣಿಕರು ಮುಂದಾಗಿ ಕಾರು ಚಾಲಕನನ್ನು ನೀರಿನಿಂದ ಹೊರ ತಂದಿದ್ದಾರೆನ್ನಲಾಗಿದೆ.ಚಾಲಕ ಪಾರಾಗಿದ್ದು ಕಾರನ್ನು ಬೆಳಗ್ಗೆ ಹೊರ ತೆಗೆಯಲಾಗಿದೆ 

Previous Post Next Post