ಲಯನ್ಸ್ ಕ್ಲಬ್ ನಲ್ಲಿ ವೈಯಕ್ತಿಕ ಹಣಕಾಸು ಅರಿವು ಕಾರ್ಯಕ್ರಮ
ತೀರ್ಥಹಳ್ಳಿ : ಲಯನ್ಸ್ ಕ್ಲಬ್ ತೀರ್ಥಹಳ್ಳಿ ಮತ್ತು SKY ಫಂಡ್ಸ್ಮಾರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ವೈಯಕ್ತಿಕ ಹಣಕಾಸು ಅರಿವು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಹಣ ಹೂಡಿಕೆ, ಬಂಡವಾಳ ನಿರ್ಮಾಣ ಮತ್ತು ದೀರ್ಘಾವಧಿ ಹಣಕಾಸು ಯೋಜನೆಯ ಮಹತ್ವದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮವನ್ನು SKY ಫಂಡ್ಸ್ಮಾರ್ಟ್ ಸಂಸ್ಥಾಪಕ ಹಾಗೂ ಹಿರಿಯ ಹಣಕಾಸು ಸಲಹೆಗಾರ ಶ್ರೀ ಸುರೇಶ ಆಚಾರ್ಯ ಅವರು ನೇರವೇರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ನಂಬಳ ಅವರು ಹಾಗೂ ಕಾರ್ಯದರ್ಶಿ ರಾಘವೇಂದ್ರರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಹಣಕಾಸು ಶಿಕ್ಷಣವು ಸಮುದಾಯದ ಸಬಲತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯೆಂದು ಹೇಳಿದರು. ಸದಸ್ಯರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಯಿತು.
SKY ಫಂಡ್ಸ್ಮಾರ್ಟ್ ತಂಡವು ತೀರ್ಥಹಳ್ಳಿ ಲಯನ್ಸ್ ಕ್ಲಬ್ ಸದಸ್ಯರಿಗೆ ತಮ್ಮ ಸಹಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಿದೆ ಮತ್ತು ಭವಿಷ್ಯದಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದೆ.
Tags:
ತೀರ್ಥಹಳ್ಳಿ ಸುದ್ದಿ