ಮಳೆ ಇಲ್ಲ ರಜೆ ಏಕೆ ? ಎನ್ನುವ ಪೋಷಕರೇ ಈ ಸ್ಟೋರಿ ನೋಡಿ..! Tth Rain

ಮಳೆ ಇಲ್ಲ ರಜೆ ಏಕೆ ? ಎನ್ನುವ ಪೋಷಕರೇ ಈ ಸ್ಟೋರಿ ನೋಡಿ..!
ತೀರ್ಥಹಳ್ಳಿ : ಕಳೆದ ಎರಡು ಮೂರು ದಿನಗಳಿಂದ ತಾಲೂಕಿನಲ್ಲಿ ಆರಿದ್ರಾ ಮಳೆಯ ಆರ್ಭಟ ಹೆಚ್ಚಾಗಿದ್ದು ಇದರಿಂದ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯೊಂದೇ ಅಲ್ಲದೆ ಶೀತ ಗಾಳಿ ಬೀಸುತ್ತಿದೆ. ಇದರಿಂದ ಹಲವು ಅನಾಹುತ ಹಾಗೂ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮುಂಜಾಗ್ರತ ಕ್ರಮವಾಗಿ ಅಂಗನವಾಡಿ,  ಶಾಲಾ ಹಾಗೂ ಕಾಲೇಜುಗಳಿಗೆ ರಜೆ ನೀಡಲು ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಆದೇಶ ನೀಡಿದ್ದಾರೆ.

ರಜೆ ಕೊಟ್ಟರು ಸಮಸ್ಯೆ ಕೊಡದಿದ್ದರೂ ಸಮಸ್ಯೆ ಹೇಳುವ ಪೋಷಕರು.

ಭಾರಿ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ರಜೆ ನೀಡದಿದ್ದರೆ ಮಕ್ಕಳಿಗೆ ತೊಂದರೆ ಆಗುತ್ತದೆ. ಮಕ್ಕಳ ಕಷ್ಟ ಅರ್ಥ ಮಾಡಿಕೊಳ್ಳುವುದಿಲ್ಲ  ಇಂತಹ ಗಾಳಿ ಬೀಸುತ್ತದೆ ಮಕ್ಕಳಿಗೆ ಚಳಿ ಆಗುವುದಿಲ್ಲವೇ? ಎಂದು ಬೊಬ್ಬೆ ಇಡುವ ಪೋಷಕರು
ತಾಲೂಕು ಆಡಳಿತ ರಜೆ ಕೊಟ್ಟಾಗಲೂ ಮಳೆ ನಿಂತಿದೆ ರಜೆ ಅವಶ್ಯಕತೆ ಏನಿತ್ತು? ಎಂದು ಪ್ರೆಶ್ನೆ ಮಾಡುತ್ತಾರೆ. ಸಮಸ್ಯೆ ಇರುವುದು ತಾಲೂಕು ಆಡಳಿತದಲ್ಲಿ ಅಲ್ಲ ನಿಮ್ಮ ಮನಸ್ಥಿತಿಯಲ್ಲಿ. ಅದನ್ನು ಸರಿಪಡಿಸಿಕೊಳ್ಳಬೇಕು. ಅರೇ ಮಾಧ್ಯಮದವರು ನಮ್ಮ ಮೇಲೆ ಬೈಯುತ್ತಿದ್ದಾರೆ ಎಂದು ಅಂದುಕೊಂಡರೆ ಸತ್ಯ.. 

ತಾಲೂಕು ಆಡಳಿತ ಮಳೆಯ ಸಂದರ್ಭದಲ್ಲಿ ರಜೆ ನೀಡಬೇಕು ಎಂದರೆ ಹಲವು ಮುನ್ನೆಚ್ಚರಿಕೆ ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳುತ್ತದೆ. ಇಂದು ಎಷ್ಟರ ಮಟ್ಟಿಗೆ ಮಳೆ ಆಗುತ್ತದೆ, ಗಾಳಿ ಯಾವ ವೇಗದಲ್ಲಿ ಬೀಸುತ್ತದೆ ಎಂಬುದನ್ನು ತಿಳಿದು ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ ರಜೆ ನೀಡಿರುತ್ತದೆ. ಆ ಸಮಯದಲ್ಲಿ ಮಳೆ ಬಾರದೆ ಇರಬಹುದು ಅದು ಪ್ರಕೃತಿ ಸಂಬಂಧ ಪಟ್ಟಿದ್ದು. ಆದರೆ ಗಾಳಿಯಿಂದ ಮರ ಬಿದ್ದು ಅಥವಾ ಮಧ್ಯ ರಸ್ತೆಯೇ ಕುಸಿದು ಬಿದ್ದರೆ ಸಮಸ್ಯೆ ಆಗುತ್ತದೆ ಎಂಬುದನ್ನು ಅರಿತು ಮಕ್ಕಳ ಹಿತ ದೃಷ್ಟಿಯಿಂದ ರಜೆ ನೀಡಿರುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳದೆ ಮಾತನಾಡುವುದು ಸರಿಯಲ್ಲ...

ತೀರ್ಥಹಳ್ಳಿಯ ಕೆಲವು ಭಾಗದಲ್ಲಿ ಮಳೆ ಆಗುತ್ತಿದ್ದರೆ ಇನ್ನು ಕೆಲವೆಡೆ ನಿನ್ನೆ ಮಧ್ಯಾಹ್ನದಿಂದ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಶೃಂಗೇರಿ ಭಾಗದಲ್ಲಿ ಬಾರಿ ಮಳೆ ಆಗುತ್ತಿರುವುದರಿಂದ ತುಂಗಾ ನದಿ ಅಪಾಯ ಮಟ್ಟಕ್ಕೆ ಬರುತ್ತಿದ್ದು ಇದರಿಂದ ರಜೆ ನೀಡಲಾಗಿದೆ. ಶಾಲೆ ಕಾಲೇಜು ತೆರೆದರೆ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಹೊಳೆ ಬದಿಗೆ ಹೋಗುತ್ತಾರೆ. ಇದರಿಂದ ಏನಾದರು ಅವಘಡ ಸಂಭವಿಸಿದರೆ ಪೋಷಕರು ತಮ್ಮ ಮಕ್ಕಳ ತಪ್ಪು ಎನ್ನುವುದಿಲ್ಲ, ತಾಲೂಕು ಆಡಳಿತ ರಜೆ ನೀಡಿಲ್ಲ, ಪೊಲೀಸರು ಸರಿಯಾಗಿ ವ್ಯವಸ್ಥೆ ಮಾಡಿಲ್ಲ ಹಾಗಾಗಿ ಇಂತಹ ಘಟನೆ ನಡೆಯಿತು ಎಂದು ಅವರ ಮೇಲೆ ಆರೋಪ ಮಾಡುತ್ತಾರೆ. ಹಾಗಾಗಿ ಮುಂಜಾಗ್ರತ ಕ್ರಮವಾಗಿ ರಜೆ ನೀಡಿರಬಹುದು.

ಪೋಷಕರ ಸಮಸ್ಯೆ ಏನು?

ಮಕ್ಕಳಿಗೆ ಎರಡು ಮೂರು ದಿನ ರಜೆ ಕೊಟ್ಟರೆ ಮತ್ತೆ ಶಾಲೆಗೆ ಹೋಗಲು ಕೇಳುವುದಿಲ್ಲ ಎಂದು ಒಂದಾದರೆ ರಜೆ ಕೊಟ್ಟರೆ ತಮ್ಮ ಮಕ್ಕಳನ್ನು ತಾವೇ ಸುಧಾರಿಸಲು ಕಷ್ಟ ಎಂದು, ನಿಮ್ಮ ಕೈಯಲ್ಲೇ ಮಕ್ಕಳನ್ನು ಸುಧಾರಿಸಲು ಆಗುವುದಿಲ್ಲ ಎಂದಾದರೆ ಇಂತಹ ಸಂದರ್ಭದಲ್ಲಿ ಶಾಲೆಗೆ ರಜೆ ಇಲ್ಲದಿದ್ದರೆ ನದಿ ಸಮೀಪ ಹೋಗುವ ವಿದ್ಯಾರ್ಥಿಗಳನ್ನು ತಡೆಯಲು ಸಾಧ್ಯವೇ? ಇಂತಹ ಮಳೆಯಲಿ ಮಕ್ಕಳ ಜವಾಬ್ದಾರಿ ಪೋಷಕರ ಮೇಲೆ ಇರುತ್ತದೆ.. ದಯವಿಟ್ಟು ನಿಮ್ಮ ಮಕ್ಕಳ ರಕ್ಷಣೆ ನಿಮ್ಮ ಕೈಯಲ್ಲಿದೆ... ರಜೆ ನೀಡದೆ ಇದ್ದರೂ ಸಹ ನಿಮ್ಮ ಭಾಗದಲ್ಲಿ ಮಳೆಯಾದರೆ ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ 

ಇದು ನಮ್ಮ ಕಳಕಳಿ 




Previous Post Next Post