ತೀರ್ಥಹಳ್ಳಿಯ ಒಂದು ಶಾಲೆಗೆ ನಾಳೆ ರಜೆ ಘೋಷಿಸಿದ ಎಸ್'ಡಿಎಂಸಿ
ತೀರ್ಥಹಳ್ಳಿ: ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮುಂಜಾಗೃತಾ ಕ್ರಮವಾಗಿ ತಾಲೂಕಿನ ಹೊನ್ನತಾಳು ಸರ್ಕಾರಿ ಶಾಲೆಗೆ ಎಸ್'ಡಿಎಂಸಿ ಆದೇಶದ ಮೇರೆಗೆ 27 -6 -25 ರ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ.
ಕಳೆದ 24 ಗಂಟೆಗಳಿಂದ ಆಗುಂಬೆ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು ಕೆಲವೆಡೆ ಓಡಾಟಕ್ಕೆ ತೊಂದರೆಯಾಗಿದ್ದು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ಮಳೆಯ ಜೊತೆಗೆ ಶೀತ ಗಾಳಿ ಸಹ ಬೀಸುತ್ತಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ರಜೆ ಘೋಷಿಸಲಾಗಿದೆ.
ಈಗ ನೀಡಿರುವ ರಜೆಯನ್ನು ಮುಂದಿನ ದಿನದಂದು
ಸರಿಪಡಿಸಿಕೊಳ್ಳಲು ತಿಳಿಸಲಾಗಿದೆ.
Tags:
ಮಳೆ