ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ದುರ್ಮರಣ.!
ಶಿವಮೊಗ್ಗ: ಇಬ್ಬರು ಯುವಕರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಯಡವಾಲ ಗ್ರಾಮದಲ್ಲಿ ಸಂಭವಿಸಿದೆ.
ಮೃತರನ್ನು ಗೌತಮ್ ನಾಯ್ಕ್ (22) ಮತ್ತು ಕುಂಬರಗುಂಡಿ ನಿವಾಸಿ ಚಿರಂಜೀವಿ (22) ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಸ್ನೇಹಿತನ ತಂಗಿಯ ಮಗು ನೋಡಲು ಸುಮಾರು 10 ಮಂದಿ ಯುವಕರ ಗುಂಪು ಗ್ರಾಮಕ್ಕೆ ತೆರಳಿದ್ದು,ಬಳಿಕ ಈರುಳ್ಳಿ ಬೆಳೆದ ತೋಟವೊಂದರಲ್ಲಿ ಪಾರ್ಟಿ ಮಾಡಲು ತೋಟಕ್ಕೆ ಹೋಗಿದ್ದಾರೆ.
ಪಾರ್ಟಿ ವೇಳೆ ಎಣ್ಣೆಯ ಮತ್ತಿನಿಂದಾಗಿ, ಯುವಕರಲ್ಲಿ ಒಬ್ಬ ಕೃಷಿ ಹೊಂಡದ ಬಳಿ ಹೋಗಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ಕಂಡ ಇನ್ನೊಬ್ಬನು ರಕ್ಷಿಸಲು ಹೋಗಿ, ಆತನು ಕೂಡ ನೀರಿನಲ್ಲಿ ಮುಳುಗಿದ್ದಾನೆ.ಕಾರಣ ಇಬ್ಬರೂ ವಾಪಸ್ಸಾಗಲಿಲ್ಲ. ಮೃತದೇಹಗಳನ್ನು ಸ್ಥಳೀಯರು ಮೇಲಕ್ಕೆ ಎತ್ತಿದ್ದು, ಹೆಚ್ಚಿನ ತನಿಖೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.