ಹದಿನೆಂಟರ ನಂಟು ಆರ್‌ಸಿಬಿ ಪಾಲಿಗೆ ಗಂಟು - ಈ ಸಲ ಕಪ್ ನಮ್ದು
ತೀರ್ಥಹಳ್ಳಿ : ಕೊನೆಗೂ ಈ ಸಲ ಕಪ್ ನಮ್ದೇ ಎನ್ನುವ ಘೋಷವಾಕ್ಯ ವನ್ನು ಆರ್‌ಸಿಬಿ ನಿಜಗೊಳಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಇಲೆವೆನ್ಸ್ ವಿರುದ್ಧ ಆರ್‌ಸಿಬಿ ಆರು ರನ್ ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಇಲೆನ್ಸ್ ಆರ್‌ಸಿಬಿ ತಂಡವನ್ನು 190 ರನ್ ಗಳಿಗೆ ಕಟ್ಟಿ ಹಾಕಿತ್ತು ನಂತರ ಬ್ಯಾಟಿಂಗಿಗೆ ಇಳಿದ ಪಂಜಾಬ್ ಇಲೆವೆನ್ಸ್ 7 ವಿಕೆಟ್ ನಷ್ಟಕ್ಕೆ 184 ರನ್ ಗಳನ್ನ ಗಳಿಸುವಲ್ಲಿಯಷ್ಟೇ ಸಫಲವಾಯಿತು.
ಆರ್ಸಿಬಿ ಗೆಲುವಿನ ಸಾಗುತ್ತಲೇ ತೀರ್ಥಹಳ್ಳಯಲ್ಲಿ ಹಲವೆಡೆ ಸಂಭ್ರಮಾಚರಣೆ ನಡೆಸಿದೆ. ಗಾಂಧಿಚೌಕ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ. ಕೊನೆಗೂ 18 ರ ನಂಟು ಅಭಿಮಾನಿಗಳ ಜೊತೆಗೆ ಗಂಟಾಗಿ ಉಳಿದಿದೆ. ಆರ್ ಸಿ ಬಿ ಅಭಿಮಾನಿಗಳ ಸಂಭ್ರಮ ಕ್ಕೆ ಎಲ್ಲೆಯೇ ಇಲ್ಲದಂತಾಗಿದೆ.
Tags:
RCB