ಮಾಳೂರು ಸಮೀಪ ಟಿಪ್ಪರ್, ಪಿಕ್‌ಅಪ್ ನಡುವೆ ಡಿಕ್ಕಿ, ಟಿಪ್ಪರ್ ಪಲ್ಟಿ
ತೀರ್ಥಹಳ್ಳಿ: ಟಿಪ್ಪರ್ ಮತ್ತು ಪಿಕ್‌ಅಪ್ ನಡುವೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನ ಮಗುಚಿ ಬಿದ್ದಿದೆ. ಅದರ ಮುಂಭಾಗದ ಚಕ್ರಗಳು ಚೆಲ್ಲಾಪಿಲ್ಲಿಯಾಗಿರುವ ಘಟನೆ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಬಡಿ ಬಳಿ ನಡೆದಿದೆ.
ಪಿಕ್‌ಅಪ್ ವಾಹನದ ಮುಂಭಾಗ ಜಖಂಗೊಂಡಿದ್ದು, ಅದೃಷ್ಟವಶಾತ್ ಎರಡೂ ವಾಹನಗಳ ಚಾಲಕರು ಸೇರಿದಂತೆ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ.
Tags:
ಅಪಘಾತ ಸುದ್ದಿ