ಹಸುವಿನ ಕೆಚ್ಚಲು ಕೊ*ಯ್ದ ದುಷ್ಕರ್ಮಿಗಳು - ಮಲೆನಾಡಿನಲ್ಲೊಂದು ಹೇಯ ಕೃತ್ಯ..!
ಹೊಸನಗರ: ಹಸುವಿನ ಕೆಚ್ಚಲು ಕೊ*ಯ್ದ ಹೇಯ ಘಟನೆಯೊಂದು ಮಲೆನಾಡಿನ ಹೊಸನಗರ ತಾಲೂಕಿನ ವಿಜಾಪುರದಲ್ಲಿ ನಡೆದಿದೆ.
ವಿಜಾಪುರ ಗ್ರಾಮದ ವಿಜಯಕುಮಾರ್ ಎಂಬುವರಿಗೆ ಸೇರಿರುವ ಹಸು ಶನಿವಾರ ಮೇಯಲು ಹೋದ ವೇಳೆ ದುಷ್ಕರ್ಮಿಗಳು ಕೆಚ್ಚಲು ಕೊ*ಯ್ದಿದ್ದಾರೆ. ಸ್ಥಳೀಯರು ಇದನ್ನು ನೋಡಿ ಮನೆಯವರಿಗೆ ಮಾಹಿತಿ ನೀಡಿದ ನಂತರ ಸ್ಥಳೀಯರ ಸಹಕಾರದಿಂದ ಹಸುವನ್ನು ಮನೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Tags:
ಹೊಸನಗರ ಸುದ್ದಿ