ಇಂದು ಯಕ್ಷಭೂಮಿ (ರಿ) ತೀರ್ಥಹಳ್ಳಿಯ 3 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ "ಶಿವ ಕಲ್ಯಾಣ" ಯಕ್ಷಗಾನ
ತೀರ್ಥಹಳ್ಳಿ : ಯಕ್ಷಗಾನ ಅಧ್ಯಯನ ಕೇಂದ್ರ ಯಕ್ಷಭೂಮಿ ತೀರ್ಥಹಳ್ಳಿ (ರಿ ) ಇವರ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ " ಶಿವ ಕಲ್ಯಾಣ " ಎಂಬ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ. ಇಂದು ಸಂಜೆ 6:30 ಕ್ಕೆ ಗೋಪಾಲಗೌಡ ರಂಗಮಂದಿರದಲ್ಲಿ ಯಕ್ಷಗಾನ ನಡೆಯಲಿದ್ದು ಉಚಿತ ಪ್ರವೇಶ ಇರಲಿದೆ.
ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರವು ಕಳೆದ ಮೂರು ವರ್ಷಗಳಿಂದ ತೀರ್ಥಹಳ್ಳಿ ಶಾಲಾ ಕಾಲೇಜು ಮತ್ತು ರಾಜ್ಯ ರಾಷ್ಟ್ರಮಟ್ಟದ ರಂಗ ಶಿಕ್ಷಣ ಕೇಂದ್ರಗಳಿಗೆ ತರಬೇತಿ ನೀಡುತ್ತಾ ಬಂದಿದೆ. ಇಂದು ಸಂಜೆ 6:30 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ತೀರ್ಥಹಳ್ಳಿ ತಾಲೂಕಿನ ಹಿರಿಯ ತಾಳಮದ್ದಳೆ ಅರ್ಥಧಾರಿಗಳಾದ ದರಲಗೋಡು ಕೃಷ್ಣ ಜೋಯಿಸ್, ಮಂಗಳಗಾರು ರಮೇಶ್ ಆಚಾರ್ಯ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಯಕ್ಷಗಾನ ಅಭಿಮಾನಿಗಳು, ಹಾಗೂ ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಲು ಮನವಿ ಮಾಡಲಾಗಿದೆ.
Tags:
ತೀರ್ಥಹಳ್ಳಿ ಸುದ್ದಿ