ತೀರ್ಥಹಳ್ಳಿಯಲ್ಲಿ ಮಲ್ನಾಡೋತ್ಸವ: ಇಂದು ಸಂಜೆ ಡ್ಯಾನ್ಸ್
ತೀರ್ಥಹಳ್ಳಿ : ಮಾಧ್ಯಮ ಸಂಸ್ಥೆಯಾಗಿರುವ ನಮ್ಮೂರ್ ಎಕ್ಸ್ ಪ್ರೆಸ್ ನ 10 ನೇ ವರ್ಷದ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿರುವ ಮಲ್ನಾಡೋತ್ಸವ - 2025ರಲ್ಲಿ ಇಂದು ಸಂಜೆ ಡಾನ್ಸ್ ಎಕ್ಸ್ ಪ್ರೆಸ್ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಪ್ರಸಿದ್ಧ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರ ಹಾಗೂ ಪಟ್ಟಣ ಪಂಚಾಯಿತಿ ಆವರಣದಲ್ಲಿ ಸುಮಾರು 70 ಹೆಚ್ಚು ವಿವಿಧ ಮಳಿಗೆಗಳು ಜನರನ್ನು ಆಕರ್ಷಣೆ ಮಾಡಿವೆ. ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 60ಕ್ಕೂ ಹೆಚ್ಚು ಕೃಷಿ, ಆಹಾರ, ಫ್ಯಾಶನ್ ಹಾಗೂ ಆಟೋ, ರಿಯಲ್ ಎಸ್ಟೇಟ್ ಮುಂತಾದ ಮಳಿಗೆಗಳು ಬಂದಿದ್ದು, ತೀರ್ಥಹಳ್ಳಿ ಪಟ್ಟಣ ಮತ್ತು ತಾಲೂಕಿನ ಸಮಸ್ತ ಜನರನ್ನು ಆಯೋಜಕರು ಸ್ವಾಗತಿಸಿದ್ದಾರೆ. ಬೆಳಿಗ್ಗೆಯಿಂದ ರಾತ್ರಿವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೇ 11ರ ಸಂಜೆ 6ರಿಂದ ರಾತ್ರಿವರೆಗೆ ರಾಜ್ಯದ ಪ್ರಸಿದ್ಧ ನೃತ್ಯ ಕಲಾವಿದರಿಂದ ಡಾನ್ಸ್ ಎಕ್ಸ್ಪ್ರೆಸ್ ನಡೆಯಲಿದೆ.




