ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದ ದೀಕ್ಷಾಳನ್ನು ಸನ್ಮಾನಿಸಿದ ಸಚಿವ ಮಧು ಬಂಗಾರಪ್ಪ Madhu bangarappa

 ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದ ದೀಕ್ಷಾಳನ್ನು ಸನ್ಮಾನಿಸಿದ ಸಚಿವ ಮಧು ಬಂಗಾರಪ್ಪ







ಶಿವಮೊಗ್ಗ:  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಕ್ಕೆ 599 ಅಂಕ ಪಡೆದು ನಂತರ ಮರು ಮೌಲ್ಯಮಾಪನದಲ್ಲಿ 600ಕ್ಕೆ 600 ಅಂಕ ಪಡೆಯುವ ಮೂಲಕ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದಿದ್ದ ತೀರ್ಥಹಳ್ಳಿಯ ವಿದ್ಯಾರ್ಥಿನಿ ದೀಕ್ಷಾಳನ್ನು ಶಿಕ್ಷಣ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅಭಿನಂದಿಸಿ ಸನ್ಮಾನಿಸಿದರು.

ತೀರ್ಥಹಳ್ಳಿಯ ವಾಗ್ದೇವಿ ಪಿ ಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ದೀಕ್ಷಾ ಈ ಬಾರಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದರು. ಆದರೆ ಒಂದು ಅಂಕ ಕಡಿಮೆ ಬಂದ ಹಿನ್ನಲೆಯಲ್ಲಿ ಮತ್ತೊಮ್ಮೆ ಮರು ಮೌಲ್ಯಮಾಪನ ಮಾಡಿಸಿ 600 ಅಂಕ ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿದ್ದರು. ಅವರನ್ನು ಶಿವಮೊಗ್ಗದಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ಬೇಳೂರು ಗೋಪಾಲ ಕೃಷ್ಣ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಎಸ್ ಪಿ ಮಿಥುನ್ ಕುಮಾರ್ ಸೇರಿ ಹಲವರು ಇದ್ದರು.

 






Previous Post Next Post