ಎಸ್ಎಸ್ಎಲ್'ಸಿ ಫಲಿತಾಂಶ - ಅಮೋಘ ಸಾಧನೆ ಮಾಡಿದ ಕ್ರಿಸ್ಟ್ ಕಿಂಗ್ ಸಂಸ್ಥೆ ವಿದ್ಯಾರ್ಥಿಗಳು Christ king

ಎಸ್ಎಸ್ಎಲ್'ಸಿ ಫಲಿತಾಂಶ - ಅಮೋಘ ಸಾಧನೆ ಮಾಡಿದ ಕ್ರಿಸ್ಟ್ ಕಿಂಗ್ ಸಂಸ್ಥೆ ವಿದ್ಯಾರ್ಥಿಗಳು

 


ಕಾರ್ಕಳ: ಈ ಬಾರಿಯ ಹತ್ತನೇತರಗತಿ ಫಲಿತಾಂಶದಲ್ಲಿ ಕಾರ್ಕಳದ ಕ್ರಿಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತೊಮ್ಮೆ ಅಮೋಘ ಫಲಿತಾಂಶವನ್ನು ಪಡೆದುಕೊಂಡಿದೆ.

ಸಂಸ್ಥೆಯ ವಿದ್ಯಾರ್ಥಿನಿ ಪ್ರಕೃತಿ ಪಿ ಗುಡಿಗಾರ್ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ಆದಿಶ್ರೀ ಎಂ ಆಚಾರ್ಯ 618 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಎಂಟನೇ ರ‍್ಯಾಂಕ್  ಪಡೆದಿದ್ದಾಳೆ. 11 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು 125 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 50 ವಿದ್ಯಾರ್ಥಿಗಳು ಉನ್ನತ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.


ಉಳಿದಂತೆ 71 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಮೂವರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಪರೀಕ್ಷೆ ಬರೆದ ಸಂಸ್ಥೆಯ 97% ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದಂತಾಗಿದೆ. ಒಟ್ಟು 33 ವಿದ್ಯಾರ್ಥಿಗಳು ಎ+ ಅಂದರೆ 90 ಶೇಕಡಾಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ.


600 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಈ ಕೆಳಕಂಡಂತಿದೆ. 

ಪ್ರಕೃತಿ ಪಿ ಗುಡಿಗಾರ್ 624 ,  ಆದಿಶ್ರೀ ಎಂ ಆಚಾರ್ಯ 618 , ಸ್ಲೀಟಾ ಪ್ರೀಮಲ್ ಫೆರ್ನಾಂಡಿಸ್ 613, ಸುದೀಕ್ಷಾ. ಜೆ 613, ಅನಘ ರಾವ್ 608, ಅನನ್ಯ ವಿ 606, ಕೀರ್ತನ್ ಡಿಸೋಜ 606. ಮೇಘ ವಿ.ಎಂ 605, ವಿಯೋಲಾ ಶಾನ್ಲಿಟೆಲ್ಲಿಸ್ 605,ಅನನ್ಯ ಬಿ 604,  ಪ್ರಿನ್ಸನ್ ಮೆಂಡೋನ್ಸಾ 601 


95% ಶೇಕಡಾಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು

ಸಾವನ್ ಎಸ್ ವರ್ಮ ಹೆಗ್ಡೆ 598, ಅನನ್ಯ597, ಸಾನಿಕಾ ಸಾಲಿಯಾನ್ 597 .

ಈ ಮೂಲಕ ಒಟ್ಟಾರೆಯಾಗಿ 14 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ಸುಪ್ರಭಾ ಸುರೇಶ್ ಪೂಜಾರಿ 593, ನತಾಶಾ ಪಿಂಟೊ 590, ಮಿಶಲ್ ಪಿಂಟೊ 589, ರಿಫಾ ಆಯಿಷಾ 583, ಸಾಲಿಯಾ ಶೇಖ್ 583, ಸಿಂಚನಾ ಆಚಾರ್ಯ 583, ಜೆನೆಲಿಯಾ ಜಿ ಮೊರಾಸ್ 582, ಸಮ್ಯಕ್ ಮಾಬೆನ್ 580, ಶ್ರಾವ್ಯ ಶೆಟ್ಟಿ 580, ಮೊಹಮ್ಮದ್ ಫಾರಿಝ್ 579, ಸ್ಪರ್ಶಪ್ರಭ 575, ಅನುಷ್ಕಾ ಡಿಲಿಶಾ ರೋಡ್ರಿಗಸ್ 573, ಜಾನಿಸ್ ಮೆನೇಜಸ್ 571, ಸೃಷ್ಟಿ ಭಂಡಾರಿ 570 , ಮೊಹಮ್ಮದ್ ಆರಿಝ್ 568, ನಿತಿನ್ ಎನ್ ಶೆಣೈ 568, ಎಸ್ ಜಿ ಗಗನ್ ಭಟ್ 568, ಜಿಯಾ ಪ್ರಕಾಶ್ 567, ಮೊಹಮ್ಮದ್ ಇಶಾಮ್ 563 ಶೇಕಡಾ 90% ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ.

ಕನ್ನಡದಲ್ಲಿ 20, ಹಿಂದಿಯಲ್ಲಿ 2 ,ಗಣಿತದಲ್ಲಿ 4 , ವಿಜ್ಞಾನದಲ್ಲಿ 4, ಸಮಾಜ ವಿಜ್ಞಾನದಲ್ಲಿ 13 ಹೀಗೆ ಒಟ್ಟು 43  ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.


Previous Post Next Post