ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತಗೊಂಡಿದೆ - ಶಾಸಕ ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ಜನನಿ ಬಿಡುವಾದ ರಸ್ತೆ ಮೇಲೆ ಸುಹಾಸ್ ಶೆಟ್ಟಿಯ ಬರ್ಬರ ಕೊಲೆ ನಡೆದಿದೆ. ಇದನ್ನ ಖಂಡಿಸುತ್ತೇನೆ. ಹಿಂದುತ್ವದ ಹಿಂದುಗಳ ಮೇಲೆ ಈ ರೀತಿಯಾದ ಹತ್ಯೆಗಳು ನಡೆಯುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಂಗಳೂರು ಹತ್ಯೆ ಬಗ್ಗೆ ವಿಡಿಯೋ ಹೇಳಿಕೆ ನೀಡಿರುವ ಅವರು ಮುಸಲ್ಮಾನ ಕೋಮುವಾದಿ ಸಂಘಟನೆಗಳು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್ ಐ ಎ ತನಿಕೆಗೆ ಕೊಟ್ಟು ತನಿಖೆ ನಡೆಸಲು ಪ್ರಾರಂಭ ಮಾಡಿದ ಮೇಲೆ ಅದರಲ್ಲಿ ಕೆಲವು ಸಂಘಟನೆಗಳು ಇದ್ದವು ಎಂದು ಬಹಿರಂಗಗೊಂಡಿತ್ತು ಹಾಗೆ ಅದರಲ್ಲಿದ್ದವರನ್ನು ಸಹ ಬಂಧನ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಕುಸಿತಗೊಂಡಿದೆ. ಪೊಲೀಸರ ಮಾತು ಯಾರು ಕೇಳುತ್ತಿಲ್ಲ ಹಾಗೆಯೇ ಪೊಲೀಸರು ನಿಷ್ಕ್ರಿಯವಾಗಿದ್ದಾರೆ. ಪೊಲೀಸ್ ಇಲಾಖೆ ಎನ್ನುವಂತಹದ್ದು ಸತ್ತು ಮಲಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಹಾಸ್ ಶೆಟ್ಟಿಯನ್ನ ಮುಗಿಸುತ್ತೇವೆ ಎಂಬುದಾಗಿ ಹಾಕಲಾಗಿತ್ತು. ಕಂಪ್ಲೇಂಟ್ ಮಾಡಿದರು ಪೊಲೀಸರು ನಿಗಾ ವಹಿಸಿಲ್ಲ. ಇದರಲ್ಲಿ ಸೂಕ್ತ ತನಿಖೆ ನಡೆಸಿ ಎಲ್ಲರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಸುಹಾಸ್ ಶೆಟ್ಟಿಯ ಕಾರನ್ನು ಕೂಡ ಇತ್ತೀಚಿಗೆ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ತನ್ನ ಆತ್ಮ ರಕ್ಷಣೆಗೂ ಕೂಡ ಯಾವುದೇ ಆಯುಧವನ್ನು ಇಟ್ಟುಕೊಳ್ಳದ ಹಾಗೆ ನೋಡುತ್ತಿದ್ದರು. ವ್ಯವಸ್ಥಿತವಾಗಿ ಪೊಲೀಸರು ಸೇರಿ ಈ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಪೋಲೀಸರನ್ನು ಸಹ ತನಿಖೆ ಮಾಡಬೇಕಿದೆ. ಇದು ಹಿಂದುಗಳ ಮೇಲೆ ನಡೆದ ಬಹಳ ದೊಡ್ಡದೌರ್ಜನ್ಯವಾಗಿದೆ. ಇದನ್ನು ಯಾರೂ ಕೂಡ ಕ್ಷಮಿಸಲಾಗುವುದಿಲ್ಲ. ಎನ್ ಐ ಎ ಗೆ ಈ ಪ್ರಕರವನ್ನು ಕೊಡಬೇಕು ಎಂದರು.
