ಪಂಚ ದೇವರ ಕ್ಷೇತ್ರ ಆಲಬಳ್ಳಿಯಲ್ಲಿ 67 ನೇ ವರ್ಷದ ವಿಜ್ರಂಭಣೆಯ ವಾರ್ಷಿಕ ಜಾತ್ರೆ
ತೀರ್ಥಹಳ್ಳಿ: ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸವಳ್ಳಿ ಗ್ರಾಮದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಆಲಬಳ್ಳಿ ಪಂಚ ದೇವರ ಕ್ಷೇತ್ರವಾದ ಶ್ರೀ ಪಂಚಮುಖಿ ಮಹಾಗಣಪತಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ, ಶ್ರೀ ನಾಗದೇವರು, ಶ್ರೀ ಚಾಮುಂಡೇಶ್ವರಿ ಶ್ರೀ ಹೊನ್ನವತ್ತಮ್ಮ ಮತ್ತು ಶ್ರೀ ಗುಳ್ಳೇಮಾರಿಯಮ್ಮ ದೇವಸ್ಥಾನದಲ್ಲಿ ಇಂದು ಮಂಗಳವಾರ ರಾತ್ರಿ ಇನ್ನೂ ಕೆಲವೇ ಸಮಯದಲ್ಲಿ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ 67ನೇ ವರ್ಷದ ವಾರ್ಷಿಕ ಜಾತ್ರೆ ಉತ್ಸವ ಮತ್ತು ಕೆಂಡಸೇವೆ ಜರುಗಲಿದೆ.
ಪಟ್ಟಣದಲ್ಲಿ ಶ್ರೀ ಚಾಮುಂಡೇಶ್ವರಿ ದೇವರ
ಪಲ್ಲಕ್ಕಿ ಉತ್ಸವ ಸಡಗರ
ಇಂದು ಮಧ್ಯಾಹ್ನ 4.30 ಗಂಟೆಗೆ ಚಾಮುಂಡೇಶ್ವರಿ ಅಮ್ಮನವರ ಪಲ್ಲಕ್ಕಿ ಪಂಚ ದೇವರಕ್ಷೇತ್ರ ಆಲಬಳ್ಳಿಯಿಂದ ಹೊರಟು ಸಂಜೆ 5 ಗಂಟೆಗೆ ಶ್ರೀ ರಾಮೇಶ್ವರ ದೇವಸ್ಥಾನ ತಲುಪಿ ಅಲ್ಲಿಂದ ರಥಬೀದಿ ರಸ್ತೆ ಮೂಲಕ ರಾಜಬೀದಿ ಉತ್ಸವದಲ್ಲಿ ಗಾಂಧಿಚೌಕ ತಲುಪಿ ಕಲ್ಲಾರೆ ಮಹಾಗಣಪತಿ ದೆವಸ್ಥಾನ, ಶ್ರೀ ಮಾರಿಕಾಂಬ ದೇವಸ್ಥಾನ ತಲುಪಿ ಅತ್ಯಾಕರ್ಷಕ ಸಿಡಿಮದ್ದು ಪ್ರದರ್ಶನ ಮೂಲಕ ಕೊಪ್ಪಸರ್ಕಲ್ ತಲುಪಿ ಕೊಪ್ಪ ರಸ್ತೆಯ ಕುವೆಂಪು ಮಾರ್ಗವಾಗಿ ಕುರುವಳ್ಳಿ ತಲುಪಲಿದೆ. ಅಲ್ಲಿಂದ ಅದೇ ಮಾರ್ಗವಾಗಿ ಪುತ್ತಿಗೆ ಮಠ ವಿಠಲನಗರ, ಹೆಗ್ಗೆಬೈಲು ಹಲಸಿನಹಳ್ಳಿ ತುಂಬಡಿ ಮಾರ್ಗವಾಗಿ ಆಲಬಳ್ಳಿ ದೇವಸ್ಥಾನವನ್ನು ತಲುಪುವುದು.
ಈ 67 ನೇ ವರ್ಷದ ಕೆಂಡಸೇವೆ ಕಾರ್ಯಕ್ರಮದಲ್ಲಿ ಭಕ್ತ ಮಹಾಶಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ವಿ. ಸೂ :ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನವು ಕುರುವಳ್ಳಿಯಿಂದ 5ಕಿಮೀ ದೂರದಲ್ಲಿದೆ.
