ಎಣ್ಣೆಗಾಗಿ ದೇವರ ಹಣಕ್ಕೆ ಕೈ ಹಾಕಿದ ಆಸಾಮಿ...!
ತೀರ್ಥಹಳ್ಳಿ : ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅಂತ ಹೇಳಿ ಕುಡಿಯೋಕೆ ಹಣ ಕೊಡಲ್ಲ ಹಾಗಾಗಿ ದೇವರ ಬಳಿ ಬಂದ ಮದ್ಯವ್ಯಸನಿಯೊಬ್ಬ ತಾನೇ ಹಣ ಹಾಕಿ ಮತ್ತೆ ತಾನೇ ಹಣ ವಾಪಾಸ್ ತೆಗೆದುಕೊಂಡು ಹೋದ ವಿಚಿತ್ರ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿಯ ಹೃದಯ ಭಾಗದಲ್ಲಿರುವ ದೇವಸ್ಥಾನವೊಂದರಲ್ಲಿ ಇಂದು ಮದ್ಯವ್ಯಸನಿಯೊಬ್ಬ ಬಂದಿದ್ದಾನೆ. ದೇವರಿಗೆ ಕೈ ಮುಗಿದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಆದರೆ ದೇವರು ಹಾಗೆ ಕೊಡುವುದಿಲ್ಲ ಎಂದು ಕೊಂಡು ದೇವರಿಗೆ ಎರಡು ರೂಪಾಯಿ ಹಾಕಿದ್ದಾನೆ. ನಂತರ ದೇವರಿಗೆ ನೀನೆ ನನಗೆ ಇಂದಿನ ದಾರಿ ಎಂದು ದೇವರ ಬಳಿ ಇದ್ದ 50 ರೂ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಆತ ಹಣ ಕದ್ದನೋ ಅಥವಾ ತಾನು ಕೊಟ್ಟ ಹಣಕ್ಕೆ ಪ್ರಸಾದ ಎಂದು ಕಾಸಿನ ಬದಲು ನೋಟು ತೆಗೆದುಕೊಂಡನೋ ಎಂಬುದೇ ಯಾರಿಗೂ ಅರ್ಥವಾಗಿಲ್ಲ. ಒಟ್ಟಿನಲ್ಲಿ ದೇವರ ಬಳಿಯೇ ಎಣ್ಣೆಗಾಗಿ ಕೈ ಹಾಕಿದ್ದು ತಪ್ಪಾದರೂ ತಪ್ಪು ಕಾಣಿಕೆ ಹಾಕಿದ್ದಾನೆ ಎಂದು ಎಲ್ಲರೂ ಹಾಸ್ಯಭರಿತರಾಗಿ ಮಾತನಾಡಿದ್ದಾರೆ.
%20(4)%20(8).jpg)