ತೀರ್ಥಹಳ್ಳಿಯ ರಾಮೇಶ್ವರನ ತೆಪ್ಪೋತ್ಸವಕ್ಕೆ ವರ್ಣರಂಜಿತ ತೆರೆ
- ಸಾವಿರಾರು ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವ
- ಬಾನಂಗಳದಲ್ಲಿ ಮಿಂಚಿದ ಪಟಾಕಿಯ ಜೇಂಕಾರ
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಿದ್ಧ ಎಳ್ಳಮಾವಾಸ್ಯೆ ಜಾತ್ರೆಯ ತೆಪ್ಪೋತ್ಸವಕ್ಕೆ ಬುಧವಾರ ತೆರೆ ಬಿದ್ದಿದ್ದು, ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತು.
ತೆಪ್ಪದಲ್ಲಿ ದೇವರ ಉತ್ಸವವನ್ನ ಮಾಡಿದ ಬಳಿಕ ಬೆಳಕಿನ ದೀಪದಲ್ಲಿ ತೆಪ್ಪೋತ್ಸವ ನಡೆಯಿತು. ಸಾವಿರಾರು ಭಕ್ತರು ತುಂಗಾನದಿ ತೀರದಲ್ಲಿ ಸೇರಿದ್ದು, ಕೇಕೆ, ಶಿಳ್ಳೆ, ಚಪ್ಪಾಳೆ ಮೂಲಕ ಜಯಘೋಷ ಹಾಕಿದರು . ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಶ್ರೀ ರಾಮೇಶ್ವರನ ದರ್ಶನ ಪಡೆದರು. ತೀರ್ಥಹಳ್ಳಿಯ ಪಟ್ಟಣ ಜನರಿಂದ ತುಂಬಿ ಹೋಗಿದ್ದು, ರಥಬೀದಿಯಲ್ಲಿ ತೆಪ್ಪೋತ್ಸವಕ್ಕೆ ಭಕ್ತರ ನೂಕು ನುಗ್ಗಲು ಉಂಟಾಗಿತ್ತು.
ತುಂಗಾತೀರದಲ್ಲಿ ನಡೆದ ತೆಪ್ಪೋತ್ಸವ ದೀಪಾಲಂಕಾರ ನೋಡಿ ಭಕ್ತರು ಪುನೀತರಾದರು. ಬಾನಂಗಳದಲ್ಲಿ ಪಟಾಕಿ ಹೊಡೆಯುತ್ತಿದ್ದಂತೆ ಕೇಕೆ ಮತ್ತು ಶಿಳ್ಳೆ ಮೊಳಗುತ್ತಿದ್ದದು ಗಮನ ಸೆಳೆಯಿತು. ತುಂಗಾತೀರದಲ್ಲಿ ಫೋಟೋಗಳು, ಸೆಲ್ಫಿಗಳು ಸಾವಿರಾರು ಜನರ ಗಮನ ಸೆಳೆಯಿತು. ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಕಳೆದ 3 ದಿನಗಳಿಂದ 50 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಅನ್ನ ಪ್ರಸಾದವನ್ನು ಪಡೆದರು. ದೇವಸ್ಥಾನದ ಸಮಿತಿಯ ಅಚ್ಚುಕಟ್ಟಿನ ಆಯೋಜನೆ ಮಾದರಿಯಾಯಿತು.
ದೇವಸ್ಥಾನದಲ್ಲಿ ಅಲಂಕಾರ, ವಿಶೇಷ ಪೂಜೆ ಮತ್ತು ವಿದ್ಯುತ್ ಅಲಂಕಾರ ಮತ್ತು ಅಂಗಡಿ ಮುಂಗಟ್ಟುಗಳ ಸಂಭ್ರಮ, ಜಾತ್ರೆಗೆ ಆಗಮಿಸಿದ ಭಕ್ತರ ಸಂಭ್ರಮ ಎದ್ದು ಕಾಣುತ್ತಿತ್ತು. ತೆಪ್ಪೋತ್ಸವದಲ್ಲಿ ತುಂಗಾನದಿಯ ತೀರದಲ್ಲಿ ನಡೆದ ಹಬ್ಬಕ್ಕೆ ಶಾಸಕ ಆರಗ ಜ್ಞಾನೇಂದ್ರ, ಆರ್ ಎಂ ಮಂಜುನಾಥ್ ಗೌಡರು, ತೆಪ್ಪೋತ್ಸವ ಸಮಿತಿಯ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ, ಡಾ. ಸುಂದರೇಶ್, ಎಲ್ಲಾ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಸ್ಥಳೀಯ ಜನನಾಯಕರು ಆಗಮಿಸಿದ್ದರು.
ತೆಪ್ಪೋತ್ಸವ ಮತ್ತು ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಯ ಸಂಪೂರ್ಣ ಸುದ್ದಿ ಹಾಗೂ ನೇರಪ್ರಸಾರವನ್ನು ಶಿವಮೊಗ್ಗ ಸುದ್ದಿ ಪ್ರಕಟ ಮಾಡಿದ್ದು, ಜಾತ್ರೆಯ ಅಂಗಡಿ ಮುಂಗಟ್ಟುಗಳು ಇನ್ನು ಮೂರು ನಾಲ್ಕು ದಿನ ಮುಂದುವರೆಯಲಿದೆ. ಜಾತ್ರೆಯ ಬಗ್ಗೆ ಕಳೆದ ಒಂದು ವಾರದಿಂದ ಶಿವಮೊಗ್ಗ ಸುದ್ದಿ ನಿರಂತರ ಸುದ್ದಿಗಳನ್ನು ಪ್ರಕಟ ಮಾಡಿದ್ದು, ರಾಜ್ಯಾದ್ಯಂತ ಜನರು ಜಾತ್ರೆಯ ಸಂಭ್ರಮ ನೋಡಿ ಖುಷಿ ಹಂಚಿಕೊಂಡಿದ್ದಾರೆ.
%20(4)%20(10)%20(5).jpg)