ತಾಲೂಕಿನ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಸಿದ ಆರಗ
ತೀರ್ಥಹಳ್ಳಿ : ತಾಲೂಕಿನ ಎಸ್ಎಸ್ಎಲ್'ಸಿ ಫಲಿತಾಂಶ ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಶೇ. 100 ರಷ್ಟು ಬರುತ್ತಿದ್ದು ಈ ಬಾರಿಯೂ ಸಹ ಶೇ 100ರಷ್ಟು ಫಲಿತಾಂಶ ಬರುವಂತೆ ಪೂರ್ವ ತಯಾರಿ ನಡೆಸಿಕೊಳ್ಳುವ ಉದ್ದೇಶದಿಂದ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರು ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಕರೆದು ಸಭೆ ನಡೆಸಿದರು.
ಈ ಬಾರಿ ಎಸ್ಎಸ್ಎಲ್'ಸಿ ಪರೀಕ್ಷೆಗೆ ಸಮಯ ನಿಗದಿಯಾಗಿದ್ದು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಎಲ್ಲಾ ಶಾಲೆಯ ಶಿಕ್ಷಕರು ಶಿಕ್ಷಣದ ಬಗ್ಗೆ ಶ್ರಮ ಪಟ್ಟು ಮಕ್ಕಳಿಗೆ ಉತ್ತಮವಾದ ತರಬೇತಿ ನೀಡಬೇಕು ಎಂದು ತಿಳಿಸಿದರು..ಈ ಬಾರಿ ಸಹ ಶೇ 100 ರಷ್ಟು ಅಂಕ ಪಡೆಯುವಂತೆ ಮಾಡಬೇಕು ಎಂದು ಶಿಕ್ಷಕರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ಶಿಕ್ಷಕರ ಸಂಘದ ಭೋಜರಾಜ್, ರಮೇಶ್, ಹಾಗೂ ಶಿಕ್ಷಕರು ಉಪಸ್ಥಿತರಿದ್ದರು
Tags:
ಆರಗ ಜ್ಞಾನೇಂದ್ರ
