ನವ "ನವೀನ" ವಾಗಿ ಮಾತನಾಡಿ ದ ಕಿಮ್ಮನೆ ರತ್ನಾಕರ್ kimmane ratnakar

ನವ "ನವೀನ" ವಾಗಿ ಮಾತನಾಡಿ ದ ಕಿಮ್ಮನೆ ರತ್ನಾಕರ್ 



ತೀರ್ಥಹಳ್ಳಿ : ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯ ರಾತ್ರಿಯಲ್ಲಿ ಕೊಡೆ ಹಿಡಿದ ಎಂಬ ಗಾದೆ ಮಾತಿನಂತೆ ನವೀನ್ ಹೆದ್ದೂರು ಅವರ ಮಾತಿನ ಶೈಲಿಯಾಗಿದೆ. ನಾನು ಶಾಸಕ ಆಗಿದ್ದು 56 ನೇ ವಯಸ್ಸಿಗೆ, ನಾನು ಪ್ರತಿಭಟನೆ, ಪಾದಯಾತ್ರೆ ಮಾಡಿದಷ್ಟು ಆರಗ ಜ್ಞಾನೇಂದ್ರ ಸೇರಿ ತೀರ್ಥಹಳ್ಳಿಯಲ್ಲಿ ಇನ್ನೊಬ್ಬ ಯಾವ ರಾಜಕಾರಣಿ ಸಹ ಮಾಡಿಲ್ಲ. ರಸ್ತೆ ಮೇಲೆ ನಿಂತು ಹೋರಾಟ ಮಾಡಿ ಶಾಸಕ ಆಗಿದ್ದೆ ಹೊರತು ಅವರ ರೀತಿ ನೇಮಕಾತಿಯಿಂದ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಶುಕ್ರವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಅಮ್ರಪಾಲಿ ಸುರೇಶ್ ಹೇಳಿಕೆಯೊಂದನ್ನು ಕೊಟ್ಟಿದ್ದರು. ಅದು ಜ್ಞಾನೇಂದ್ರ ಅವರಿಗೆ ಅಲ್ಲ. ಯಡಿಯೂರಪ್ಪ ಮತ್ತು ರೇವಣ್ಣ ಮಾಡಿಸಿದ ಸೇತುವೆ ಎಂದು ಮಂಜುನಾಥ್ ಗೌಡರು ಹೇಳಿರುವ ಮಾತಿಗೆ ಹೇಳಿಕೆ ನೀಡಲಾಗಿತ್ತು. ಸೇತುವೆ ಬಗ್ಗೆ ಮಾತನಾಡಿದರೆ ರಸ್ತೆ ಬಗ್ಗೆ ಮಾತಾಡುತ್ತಾರೆ, ಅಷ್ಟು ಸೇತುವೆಗಳು ನನ್ನ ಅವಧಿಯಲ್ಲೇ ಆಗಿರುವುದು ಮಾತನಾಡಲು ಯಾರಾದರೂ ಬರಲಿ ನೋಡೋಣ ಎಂದು ಚಾಲೆಂಜ್ ಮಾಡಿದರು.

ಆಡಳಿತ ಪಕ್ಷದಲ್ಲಿ ಇದ್ದಾಗ ಅಧ್ಯಕ್ಷ ಆಗಿದ್ದವನು ನಾನು,ಈ ರೀತಿ ಕೆಟ್ಟದಾಗಿ ನೆಡೆದುಕೊಂಡಿಲ್ಲ ಹಾಗೆ ಕೆಟ್ಟದಾಗಿ ಹೇಳಿಕೆ ನೀಡಿಲ್ಲ. ಇವರು ಈಗ ಆಡಳಿತ ಪಕ್ಷದ ಅಧ್ಯಕ್ಷರಲ್ಲ.ನಾನು ಇಲ್ಲಿಂದಲೇ ಕೆಲಸ ಮಾಡಿಸುತ್ತಿದ್ದೆ ಬೆಂಗಳೂರಿಗೆ ಹೋಗುತ್ತಿರಲಿಲ್ಲ. ಕ್ಷೇತ್ರಕ್ಕೆ 5 ಸೇತುವೆ ನಾನೇ ಮಾಡಿಸಿದ್ದು, ಇವರ ಹಾಗೆ ಚೌ ಚೌ ಬಾತ್ ತಿಂದಿಲ್ಲ ಎಂದು ಕಿಚಾಯಿಸಿದರು.

ಕಣ್ಣೆದುರಿಗೆ ಮರಳು ಹೊಡೆದು ದುಡ್ಡು ಮಾಡುತ್ತಿದ್ದಾರೆ ಮೊದಲು ಅದನ್ನು ನೋಡಿಕೊಳ್ಳಲಿ, ತೀರ್ಥಹಳ್ಳಿ ಕ್ಷೇತ್ರ ನೋಡುವುದು ಬೇಡ ತಮ್ಮ ಊರಿನ ಶಾಲೆಯ ಪಕ್ಕದ ಕೋಳಿ ಒಡ್ಡಿ ಬಳಿ ನೋಡಲಿ, ಮಾಜಿ ಆಗಿದ್ದಾರೆ ಎಂದು ನನಗೆ ಹೇಳುತ್ತಾರೆ, ಇಲ್ಲಿ ಎಲ್ಲರೂ ದಿವಂಗತ ಆಗುವವರೇ, ಅವರೇನೋ ಚಿರಂಜೀವಿ ಎಂದುಕೊಂಡಿದ್ದಾರೆ ಎನಿಸುತ್ತದೆ.ತಲೆ ನೆಟ್ಟಗೆ ಇಟ್ಟುಕೊಂಡು ಮಾತನಾಡುವುದು ಕಲಿಯಬೇಕು ಅವರು ನಾನೆ ಮುಖ್ಯಮಂತ್ರಿ ಅನ್ನುವ ರೀತಿ ಮಾತನಾಡುತ್ತಾರೆ, ಜ್ಞಾನೇಂದ್ರ ಇರುವ ತನಕ ಬೇರೆಯವರಿಗೆ ಜಾಗ ಇಲ್ಲ, ಅಶೋಕ್ ಮೂರ್ತಿ, ಬೇಗುವಳ್ಳಿ ಸತೀಶ್, ಆರ್ ಮದನ್ ಆಯ್ತು ಇನ್ನು ನವೀನ್ ಬಾಕಿ ಎಂದರು.

ಈ ಸಂದರ್ಭದಲ್ಲಿ ನಾರಾಯಣ ರಾವ್, ಕೆಸ್ತೂರು ಮಂಜುನಾಥ್, ರಹಮತ್ ಉಲ್ಲಾ ಅಸಾದಿ, ಗೀತಾ ರಮೇಶ್, ಸುಶೀಲ ಶೆಟ್ಟಿ, ರಾಘವೇಂದ್ರ ಶೆಟ್ಟಿ, ವಿಲಿಯಮ್ ಮಾರ್ಟಿಸ್, ವಿಶ್ವನಾಥ್ ಶೆಟ್ಟಿ,  ಅಮರನಾಥ್ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.


Previous Post Next Post