ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾಗರಾಜ ಶೆಟ್ಟಿ ಪುನರಾಯ್ಕೆ Marikamba temple

ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾಗರಾಜ ಶೆಟ್ಟಿ ಪುನರಾಯ್ಕೆ


ತೀರ್ಥಹಳ್ಳಿ : ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ಅವಿರೋಧವಾಗಿ ನಡೆದಿದ್ದು ಈಗ ದೇವಸ್ಥಾನದ ಆಡಳಿತ ಮಂಡಳಿಗೆ ಅಧ್ಯಕ್ಷರ ಆಯ್ಕೆ ನಡೆದಿದೆ.

ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾಗರಾಜ ಶೆಟ್ಟಿ ಪುನರಾಯ್ಕೆ ಆಗಿದ್ದು ಕಾರ್ಯದರ್ಶಿಯಾಗಿ ಜಿ.ಸತ್ಯನಾರಾಯಣ ಖಜಾಂಚಿಯಾಗಿ ಜೆ. ಮಂಜುನಾಥ ಶೆಟ್ಟಿ ಮತ್ತು ಸಹಕಾರಿ ಕಾರ್ಯದರ್ಶಿಯಾಗಿ ಕೆ. ಸಿ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.






Previous Post Next Post