ತೀರ್ಥಹಳ್ಳಿಯ ಖ್ಯಾತ ವೈದ್ಯ ಇನ್ನಿಲ್ಲ!
ತೀರ್ಥಹಳ್ಳಿ : ಖ್ಯಾತ ವೈದ್ಯರಾದ ಡಾಕ್ಟರ್ ಬಿ.ಆರ್ ದಿನಮಣಿರವರು (81 ವರ್ಷ) ಇಂದು ನಿಧನರಾಗಿದ್ದಾರೆ.
ಕೊಪ್ಪ ಸರ್ಕಲ್ ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ದಿನಮಣಿರವರು ಮೊದಲಿಗೆ ತಮ್ಮ ತಂದೆಯ ಜೊತೆಗೆ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ನಂತರ ಅವರೊಬ್ಬರೇ ಚಿಕಿತ್ಸೆ ನೀಡುತ್ತಿದ್ದರು.
ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಇಂದು ಸಂಜೆ ನಾಲ್ಕು ಗಂಟೆಗೆ ತೀರ್ಥಹಳ್ಳಿಯ ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
