ತೀರ್ಥಹಳ್ಳಿಯಲ್ಲಿ ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರ ಗಂಭೀರ
ತೀರ್ಥಹಳ್ಳಿ : ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ಮರದ ಕೊಂಬೆ ತುಂಡಾಗಿ ಬಿದ್ದ ಪರಿಣಾಮ ಓರ್ವರಿಗೆ ಗಂಭೀರ ಗಾಯವಾಗಿದ್ದು ಇನ್ನೊಬ್ಬರಿಗೆ ಕಾಲು ಮೂಳೆ ಮುರಿದಿರುವ ಘಟನೆ ಮೇಗರವಳ್ಳಿ ಸಮೀಪ ನಡೆದಿದೆ.
ತಾಲೂಕಿನ ಮೇಗರವಳ್ಳಿ ಫಾರೆಸ್ಟ್ ಆಫೀಸ್ ಬಳಿ ಮರ ಬಿದ್ದಿದ್ದರಿಂದ ಬೈಕ್ ಕೂಡ ಸಂಪೂರ್ಣ ಜಖಂ ಆಗಿದೆ ಸದ್ಯ ಗಾಯಳುಗಳನ್ನು ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಹಿನ್ನಲೆಯಲ್ಲಿ ಮೇಗರವಳ್ಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಮರ ಕಡಿಸದೆ ಇದ್ದ ಕಾರಣ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದು ಜೊತೆಗೆ ಗಾಯಳುಗಳ ಚಿಕಿತ್ಸೆಗೆ ಪರಿಹಾರವನ್ನು ಅರಣ್ಯ ಇಲಾಖೆಯೇ ಭರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
Tags:
ಅಪಘಾತ ಸುದ್ದಿ
