ಇಂದಿನ ಮಕ್ಕಳೇ ಇಂದಿನ ಪ್ರಜೆಗಳಾಗಬೇಕು - ತಾಜುದ್ದೀನ್ ಖಾನ್
ತೀರ್ಥಹಳ್ಳಿ : ಇವತ್ತು ನೀವೆಲ್ಲರೂ ತಾಲೂಕು, ಜಿಲ್ಲೆ ಅಷ್ಟೇ ಅಲ್ಲ ರಾಜ್ಯದಲ್ಲೇ ಹೆಸರು ಮಾಡಿರುವ ಶಾಲೆಯಲ್ಲಿ ನೀವು ವಿದ್ಯಾಭ್ಯಾಸ ಮಾಡುತ್ತಿದ್ದೀರಾ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಹೇಳುತ್ತಾ ಇಂದಿನ ಶಿಕ್ಷಣ ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ ಇಂದಿನ ಮಕ್ಕಳೇ ಇಂದಿನ ಪ್ರಜೆಗಳಾಗಬೇಕು ಎಂದು ಮಕ್ಕಳ ಕಲ್ಯಾಣ ಇಲಾಖೆಯ ಅಧ್ಯಕ್ಷರಾಗಿರುವ ತಾಜುದ್ದೀನ್ ತಿಳಿಸಿದರು..
ವಾಗ್ದೇವಿ ಶಾಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಮಕ್ಕಳಿಗೆ ವಿಶೇಷವಾಗಿ ಮಾಹಿತಿ ನೀಡಿದ ಅವರು ಮಕ್ಕಳಿಗೆ ಹಕ್ಕುಗಳ ವಡಂಬಡಿಕೆ ಕಾನೂನಿಗೆ ಎಲ್ಲಾ ರಾಷ್ಟ್ರಗಳು ಸೇರಿದಂತೆ ಭಾರತ ಸಹ ಸಹಿ ಮಾಡಿದೆ.. ಮಕ್ಕಳ ಕಾಯ್ದೆ ಬಗ್ಗೆ ನಿಮಗೆ ಎಲ್ಲರಿಗೂ ಮಾಹಿತಿ ಇರಬೇಕು.. ಶಿವಮೊಗ್ಗ ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಯಾಗಿ ಬಾಲ್ಯ ವಿವಾಹ ಇದೆ. ಇದರ ಜೊತೆಗೆ ಭ್ರೂಣ ಹತ್ಯೆ ಇತ್ತೀಚಿಗೆ ಜಾಸ್ತಿ ಆಗುತ್ತಿದೆ.. ಪ್ರತಿ ಮಗುವಿಗೆ ಹೆಸರು ಇದೆ ಅದನ್ನು ಬಿಟ್ಟು ನಿಮಗೆ ಇಷ್ಟವಾದಂತೆ ಕರೆದರೆ ಅದು ತಪ್ಪಾಗುತ್ತದೆ. ಅದಕ್ಕೆ ಶಿಕ್ಷೆ ಕೂಡ ಇದೆ ಎಂದು ತಿಳಿಸಿದರು..
ಮಕ್ಕಳ ಸುರಕ್ಷಿತ ಬಗ್ಗೆ ಹೆಚ್ಚು ನಿಗಾವಹಿಸಬೇಕಿದೆ.. ಬಸ್ ನಿಲ್ದಾಣ, ಶಾಲೆ, ವಸತಿ ಶಾಲೆಗಳಲ್ಲಿ ಮಕ್ಕಳ ಮೇಲೆ ಶೋಷಣೆ ಆಗುತ್ತಿತ್ತು. ಈಗ ಮನೆಗಳಲ್ಲೇ ತಮ್ಮ ಕುಟುಂಬಸ್ಥರಿಂದಲೇ ಶೋಷಣೆ ಆಗುತ್ತಿದೆ. ನಮ್ಮದು ಬುದ್ದಿವಂತರ ಜಿಲ್ಲೆ ಎಂದು ಕರೆಯುತ್ತಾರೆ. ಆದರೆ ನಮ್ಮಲ್ಲೇ 42 ಕ್ಕೂ ಹೆಚ್ಚು ಕುಟುಂಬಸ್ಥರಿಂದಲೇ ದೌರ್ಜನ್ಯಕ್ಕೆ ಒಳಗಾದ ಪ್ರಕರಣ ಇದೆ.. ಹೆಣ್ಣು ಮಕ್ಕಳ ಮೇಲೆ
57 % ಶೋಷಣೆ ನಡೆಯುತ್ತಿದ್ದರೆ ಗಂಡು ಮಕ್ಕಳ ಮೇಲೆ 62% ಶೋಷಣೆ ನಡೆದಿದೆ ಎಂದು ವರದಿಯಾಗಿದೆ.. ಯಾರ ಮೇಲೆ ದೌರ್ಜನ್ಯ ನಡೆದರು ನೀವು ತಿಳಿಸಬೇಕು ಎಂದು ತಿಳಿಸಿದರು..
ಮದುವೆ ಆಗಬೇಕು ಎಂದರು ಸಹ ಅದಕ್ಕೊಂದು ಕಾನೂನು ಸರ್ಕಾರ ಮಾಡಿದೆ.. ಆದರೆ ಬಾಲ್ಯ ವಿವಾಹದಲ್ಲಿ ಇಡೀ ರಾಜ್ಯದಲ್ಲೆ ಶಿವಮೊಗ್ಗ ಜಿಲ್ಲೆ ಮೊದಲ ಸ್ಥಾನದಲ್ಲಿ ನಿಂತಿದೆ.. ಎರಡು ತಿಂಗಳ ಹಿಂದೆ ನಡೆದ ಪ್ರಕರಣ, ಈಗ ಆಕೆಗೆ 18 ವರ್ಷದ 1 ತಿಂಗಳು ಆಕೆಗೆ ಈಗಾಗಲೇ ಎರಡು ಮಕ್ಕಳು ಇದ್ದಾರೆ. ಅವಳಿಗೆ ಆಕೆಯ ಪೋಷಕರು 12 ವರ್ಷ ಇದ್ದಾಗಲೇ ಮದುವೆ ಮಾಡಿದ್ದರು. ತೀರ್ಥಹಳ್ಳಿ ತಾಲೂಕು ಇಡೀ ವಿಶ್ವದಲ್ಲೇ ಕೊಡುಗೆ ಕೊಟ್ಟಂತಹ ಊರು, ವಿಶ್ವಮಾನವ ಸಂದೇಶ ಕೊಟ್ಟ ತೀರ್ಥಹಳ್ಳಿಯಲ್ಲಿ ನಾವು ಬಾಲ್ಯ ವಿವಾಹ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ ನಮ್ಮ ಪರಿಸ್ಥಿತಿ ಎಲ್ಲಿಗೆ ಬಂದಿದೆ.. ತೀರ್ಥಹಳ್ಳಿ ಪಕ್ಕದ ಊರಿನಲ್ಲೇ 5 ನೇ ತರಗತಿ ಬಾಲಕಿಗೆ ಮದುವೆ ಮಾಡಿದ್ದರು. ಹಾಗಾಗಿ ನಿಮಗೆಲ್ಲ ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಗೊತ್ತಿರಬೇಕು. ಹಾಗೇನಾದರೂ ಮದುವೆ ಆದರೆ ಎರಡು ವರ್ಷ ಕಾಲ ಶಿಕ್ಷೆ ಹಾಗೂ ದಂಡ ತೆರಬೇಕಾಗುತ್ತದೆ ಎಂದು ತಿಳಿಸಿದರು..
ಪೋಕ್ಸೋ ಕಾಯ್ದೆ ಬಗ್ಗೆ ಪ್ರತಿಯೊಬ್ಬ ಮಕ್ಕಳಿಗೂ ಗೊತ್ತಿರಬೇಕು.. ಯಾವುದೇ ಪರ ಪುರುಷ ಅಥವಾ ಮಹಿಳೆ, ನಿಮ್ಮ ಜೊತೆಗೆ ಅಸಭ್ಯವಾಗಿ ಮುಟ್ಟುವುದು, ಮಾತನಾಡುವುದು ಮಾಡಿದರೆ ನೀವು ದೂರು ನೀಡಬಹುದು.. ನಮ್ಮ ಮುಖ, ಎದೆ, ಬೆನ್ನಿನ ಕೇಳಭಾಗ, ಈ ರೀತಿ ಜಾಗದಲ್ಲಿ ಮುಟ್ಟಿದ್ದು ಆದರೆ ಅದು ಕೆಟ್ಟ ಸ್ಪರ್ಶವಾಗಿರುತ್ತದೆ. ನಿಮ್ಮ ನೆರೆಹೊರೆಯವರು, ಸಂಬಂಧಿಕರು, ಶಿಕ್ಷಕರು, ಸ್ನೇಹಿತರು, ಯಾರೇ ಆಗಲಿ ಕೆಟ್ಟ ಸ್ಪರ್ಶ ಮಾಡಿದರೆ ನೀವು ದೂರು ನೀಡಬಹುದು.. ಆಗ ಅವರಿಗೆ ಶಿಕ್ಷೆ ಆಗುತ್ತದೆ ಎಂದು ತಿಳಿಸಿದರು..
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಪ್ರವೀಣ್ ಮಾತನಾಡಿ ಮಕ್ಕಳ ಕಲ್ಯಾಣ ಇಲಾಖೆಯ ಅಧ್ಯಕ್ಷರಾಗಿರುವ ತಾಜುದ್ದೀನ್ ಖಾನ್ ಶಾಲೆಗಳ ಕಾರ್ಯಕ್ರಮಕ್ಕೆ ಹೋಗುವುದು ತೀರಾ ಅಪರೂಪ. ತೀರ್ಥಹಳ್ಳಿಗೆ ಬರುವುದೇ ಕಡಿಮೆ ಆದರೆ ನಿಮ್ಮ ಶಾಲೆಗೆ ಬಂದಿರುವುದು ನಿಮ್ಮೆಲರ ಪುಣ್ಯ ಎಂದರು.. ನಾನು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 15 ವರ್ಷಗಳ ಕಾಲ ಪಾಠ ಮಾಡಿದ್ದೇನೆ. ನಿಮ್ಮ ಮನಸ್ಸು ಬೇರೆ ಬೇರೆ ಕಡೆ ಹೋಗುತ್ತದೆ. ಪಾಠ ಮಾಡುವಾಗ ಗಮನ ಇರುವುದಿಲ್ಲ. ಮೊದಲ ಸಾಲು ಆರಂಭಿಸಿದ್ದು ಗೊತ್ತಿರುತ್ತೆ ಆದರೆ ಆ ಪುಟ ತಿರುಗಿಸಿದಾಗ ಮಾತ್ರ ಗೊತ್ತಾಗುತ್ತದೆ. ಪಾಠದ ಬಗ್ಗೆ ಯಾರು ಹೆಚ್ಚು ಕೇಂದ್ರೀಕರಿಸುತ್ತಾರೋ ಅವರಿಗೆ ಯಶಸ್ಸು ಲಭಿಸುತ್ತದೆ ಎಂದು ತಿಳಿಸಿದರು..
ಬೇರೆ ಯಾರಿಗೂ ಉಪಕಾರ ಮಾಡದೇ ಇದ್ದರು ಅಪಕಾರ ಮಾಡುವ ಯೋಚನೆ ಸಹ ಮಾಡಬಾರದು.. ವಿದ್ಯೆಗೆ ವಿನಯವೇ ಭೂಷಣ ಎನ್ನುತ್ತಾರೆ.. ನಮ್ಮ ಮನಸ್ಥಿತಿ ಚೆನ್ನಾಗಿ ಇದ್ದರೆ, ಶಿಕ್ಷಕರಿಗೆ, ಗುರುಗಳಿಗೆ, ತಂದೆ ತಾಯಿಯರಿಗೆ ಗೌರವ ಕೊಡುವುದನ್ನು ನಾವು ರೂಡಿಸಿಕೊಂಡರೆ ವಿದ್ಯೆ ತಾನಾಗಿ ಒಲಿಯುತ್ತದೆ. ಮೊಬೈಲ್ ಅವಶ್ಯಕತೆ ಇಲ್ಲ.. ತಂದೆ ತಾಯಿ ತಮ್ಮ ಮಕ್ಕಳ ಬಗ್ಗೆ ಎಷ್ಟೋ ಕನಸು ಕಂಡಿರುತ್ತಾರೆ. ಆ ಕನಸು ನನಸು ಮಾಡಬೇಕು ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ವಲಯ ಮೇಲ್ವಿಚಾರಕರಾದ ಪವಿತ್ರಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರಾದ ಪ್ರಮೋದ್ ಎಲ್, ಮಕ್ಕಳ ಸಹಾಯವಾಣಿಯ ಆಪ್ತ ಸಮಾಲೋಚಕರಾದ ಅರ್ಪಿತಾ ಸೇರಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳಿಗೆ ಭಾಗಿಯಾಗಿದ್ದರು..
Tags:
ವಾಗ್ದೇವಿ ಸಂಸ್ಥೆ